ಪತ್ತನಂತಿಟ್ಟ: ಶಬರಿಮಲೆಯಲ್ಲಿ ನೂತನ ಭಸ್ಮಕೆರೆ ನಿರ್ಮಾಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಭಸ್ಮಕೆರೆಗೆ ಸಂಬಂಧಿಸಿದ ಮುಂದಿನ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.
ಎರಡು ವಾರಗಳ ಕಾಲ ಮಧ್ಯಂತರ ಆದೇಶ ಹೊರಡಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯು ಅಫಿಡವಿಟ್ ಸಲ್ಲಿಸಲು ನ್ಯಾಯಾಲಯದಿಂದ ವಿಸ್ತರಣೆಯನ್ನು ಕೋರಿದೆ. ಎರಡು ವಾರಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಶಬರಿಮಲೆಯಲ್ಲಿ ನೂತನವಾಗಿ ನಿರ್ಮಿಸಲಾಗುವ ಭಸ್ಮಕೆರೆಯ ಶಂಕುಸ್ಥಾಪನೆಯನ್ನು ಮೊನ್ನೆ ನೆರವೇರಿಸಲಾಗಿತ್ತು. ಮಕರ ಜ್ಯೋತಿ ಹಾಗೂ ಶಬರಿ ಅತಿಥಿ ಗೃಹಗಳ ಬಳಿ ನೂತನ ಭಸ್ಮಕೆರೆ ನಿರ್ಮಿಸಲಾಗುತ್ತಿದೆ. ಭಸ್ಮಕೆರೆ ಸಂಪೂರ್ಣ ಆಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ತಿರುವನಂತಪುರಂ ಪೂಜಾಪ್ಪುರ ಮೂಲದವರೂ, ಶಿಲ್ಪಿಯೂ ಆದ ಎಂ.ಆರ್.ರಾಜೇಶ್ ಅವರು ನಿರ್ಮಾಣ ಕಾರ್ಯದ ಜವಾಬ್ದಾರಿ ವಹಿಸಿದ್ದಾರೆ. ದೇವಸ್ವಂ ದುರಸ್ತಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ.