ಪೆರ್ಲ: ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ ಶೇಣಿ ಪ್ರದೇಶದಿಂದ ನಾಲ್ಕು ಪಂಪುಗಳನ್ನು ಕಳವುಗೈಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶೇಣಿ ಸದಾಶಿವ ಆಚಾರ್ಯ ಎಂಬವರ ಎರಡು ಪಂಪು, ರಘರಾಮ ಬೋರ್ಕರ್ ಮತ್ತು ಅಬ್ದುಲ್ಲ ಅವರ ತಲಾ ಒಂದೊಂದು ಪಂಪು ಕಳವುಗೈಯಲಾಗಿದೆ.
ಬೇಸಿಗೆಯಲ್ಲಿ ತೋಟಗಳಿಗೆ ನೀರು ಹಾಯಿಸಲು ಉಪಯೋಗಿಸುತ್ತಿದ್ದ ಪಂಪ್ಗಳನ್ನು ಇಲ್ಲಿನ ತೋಟದ ಶೆಡ್ ಹಾಗೂ ಜನ ವಾಸವಿಲ್ಲದ ಮನೆಯೊಳಗೆ ಇರಿಸಲಾಗಿತ್ತು. ಈ ನಡುವೆ ನಿನ್ನೆ ಸ್ಥಳಕ್ಕೆ ತೆರಳಿದ ಪಂಪಿನ ವಾರಸುದಾರರಿಗೆ ಸ್ಥಳದಲ್ಲಿದ್ದ ಪಂಪ್ ಕಳವಾಗಿರುವುದು ಗಮನಕ್ಕೆ ಬಂದಿತ್ತು. ನಾಲ್ಕು ಪಂಪ್ ಸೆಟ್ಗಳಿಗೆ 80 ಸಾವಿರ ರೂ. ಬೆಲೆ ಅಂದಾಜಿಸಲಾಗಿದೆ.