ತಿರುವನಂತಪುರಂ: ಓಣಂ ಹಬ್ಬಕ್ಕೂ ಮುನ್ನ ಆರೋಗ್ಯ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆಯನ್ನು ತೀವ್ರಗೊಳಿಸಿದ್ದು, ಚೆಕ್ ಪೋಸ್ಟ್ ಗಳ ಮೂಲಕ ಇತರ ರಾಜ್ಯಗಳಿಂದ ಬರುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಆಹಾರ ಭದ್ರತಾ ವಿಶೇಷ ಕಾರ್ಯಪಡೆ ನೇತೃತ್ವದಲ್ಲಿ ಪಾಲಕ್ಕಾಡ್ ಜಿಲ್ಲೆಯ ವಳಯಾರ್, ಮೀನಾಕ್ಷಿಪುರಂ ಮತ್ತು ಗೋವಿಂದಪುರಂ, ಕಾಸರಗೋಡಿನ ತಲಪ್ಪಾಡಿ, ಜಾಲ್ಸೂರು ಚೆಕ್ ಪೋಸ್ಟ್‍ಗಳಲ್ಲಿ ರಾತ್ರಿ ತಪಾಸಣೆ ನಡೆಸುತ್ತಿದೆ. 53 ವಾಹನಗಳನ್ನು ತಪಾಸಣೆ ನಡೆಸಲಾಗಿದೆ. 18 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಹೆಚ್ಚಿನ ಪರೀಕ್ಷೆಯ ಅಗತ್ಯವಿರುವ 7 ಶಾಸನಬದ್ಧ ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಪರೀಕ್ಷೆಗಾಗಿ ಎರ್ನಾಕುಳಂ ಅನಾಲಿಟಿಕಲ್ ಲ್ಯಾಬ್‍ಗೆ ಕಳುಹಿಸಲಾಗಿದೆ.
ವಾಳಯಾರ್, ಮೀನಾಕ್ಷಿಪುರಂ ಮತ್ತು ಗೋವಿಂದಪುರಂ ಚೆಕ್ ಪೆÇೀಸ್ಟ್‍ಗಳಲ್ಲಿ ಮೂರು ಸ್ಕ್ವಾಡ್‍ಗಳಲ್ಲಿ ತಪಾಸಣೆ ನಡೆಸಲಾಯಿತು. ಮೊಬೈಲ್ ಆಹಾರ ಪರೀಕ್ಷಾ ಪ್ರಯೋಗಾಲಯದ ಸಹಾಯದಿಂದ ಹಾಲು, ಹಣ್ಣುಗಳು, ಮೀನು ಮತ್ತು ತೆಂಗಿನ ಎಣ್ಣೆಯನ್ನು ಪರೀಕ್ಷಿಸಲಾಯಿತು. ಪ್ರಯೋಗಾಲಯದಿಂದ ಬರುವ ಪರೀಕ್ಷಾ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.