ಬೀಜಿಂಗ್: 'ವಿವಿಧ ದೇಶಗಳೊಂದಿಗೆ ನಡೆಸಿರುವ ಮಾತುಕತೆಗಳಲ್ಲಿ ಜಪಾನ್ ಸುಳ್ಳುಗಳ ದಾಳಿಯನ್ನೇ ಮಾಡಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯವು ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಬೀಜಿಂಗ್: 'ವಿವಿಧ ದೇಶಗಳೊಂದಿಗೆ ನಡೆಸಿರುವ ಮಾತುಕತೆಗಳಲ್ಲಿ ಜಪಾನ್ ಸುಳ್ಳುಗಳ ದಾಳಿಯನ್ನೇ ಮಾಡಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯವು ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಜಪಾನ್ ರಾಯಭಾರ ಕಚೇರಿಯ ಉಪಮುಖ್ಯಸ್ಥರಾದ ಅಕಿರಾ ಯೊಕೊಚಿ ಜೊತೆ ಸಭೆ ನಡೆಸಿದ ಏಷ್ಯನ್ ವ್ಯವಹಾರಗಳ ವಿಭಾಗದ ಮಹಾನಿರ್ದೇಶಕ ಲಿಯು ಜಿನ್ಸಾಂಗ್ ಅವರು ಈ ರೀತಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಚೀನಾದ ವಿರುದ್ಧ ಜಪಾನ್ ಅನುಸರಿಸುತ್ತಿರುವ ನಡೆಯಿಂದ, ಉಭಯ ದೇಶಗಳ ನಡುವಿನ ಪರಸ್ಪರ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಜಿನ್ಸಾಂಗ್ ತಮ್ಮ ಸಹವರ್ತಿಯ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಸಚಿವಾಯಲದ ಹೇಳಿಕೆಯು ತಿಳಿಸಿದೆ.
ಅಮೆರಿಕ-ಜಪಾನ್‌ನ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಕಳೆದ ಭಾನುವಾರ ನಡೆಸಿದ್ದರು. ಸಭೆಯ ನಂತರ ಚೀನಾ ನಡೆಯ ವಿರುದ್ಧ ಜಂಟಿ ಹೇಳಿಕೆ ನೀಡಿದ್ದರು.
ಕ್ವಾಡ್ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಅಮೆರಿಕ, ಜಪಾನ್‌ನ ಸಭೆಯು ಸೋಮವಾರ ನಡೆದಿತ್ತು. ಇಲ್ಲಿಯೂ ಚೀನಾ ವಿರುದ್ಧ ಹೇಳಿಕೆ ವ್ಯಕ್ತವಾಗಿತ್ತು.
ಈ ವಿದ್ಯಮಾನಗಳ ಬಳಿಕ ಚೀನಾ, ಜಪಾನ್ ವಿಷಯದಲ್ಲಿ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.