ಕಾಸರಗೋಡು: ನಿರಂತರ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ಅಡಕೆಯ ಕೊಳೆರೊಗ ಸಾಕಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ನಿರಂತರ ಮಳೆಯಿಂದ ಜುಲೈ ತಿಂಗಳಲ್ಲಿ ಔಷಧ ಸಿಂಪಡಣೆ ಸಾಧ್ಯವಾಗದಿರುವುದರಿಂದ ರೋಗ ಹರಡುವಿಕೆ ಮತ್ತಷ್ಟು ಹೆಚ್ಚಾಗಿದೆ. ಮಳೆ ಅಲ್ಪ ಕಡಿಮೆಯಾಗುತ್ತಿದ್ದಂತೆ ಔಷಧ ಸಿಂಪಡಣೆ ಸೇರಿದಂತೆ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಸಿಪಿಸಿಆರ್‍ಐ ಅದಿಕಾರಿಗಳು ತಿಳಿಸಿದ್ದಾರೆ.
ರೋಗ ಮತ್ತಷ್ಟು ಹರಡುವಿಕೆ ತಡೆಗಟ್ಟಲು ಕೆಲವೊಂದು ನಿಯಂತ್ರಣ ಕ್ರಮ ತಕ್ಷಣ ಕೈಗೊಳ್ಳುವಂತೆ ಸೂಚಿಸಲಾಗಿದೆ.
ತೋಟದಲ್ಲಿ ಕೊಳೆರೋಗ ಕಾಣಿಸದಿದ್ದರೂ ಎಲ್ಲಾ ಗೊಂಚಲುಗಳಿಗೆ ಶೇ.1ರಷ್ಟು ಬೋರ್ಡೆಕ್ಸ್ ಮಿಶ್ರಣ ಅಥವಾ ಮಂಡಿಪೆÇ್ರಪಮೈಡ್ ಮಿಶ್ರಣವನ್ನು ಶೇ.23.4ಎಸ್‍ಸಿ (1 ಮಿಲಿ ಪ್ರತಿ ಲೀಟರ್) ಸಿಂಪಡಿಸಬೇಕು. ಕೊಳೆರೋಗ ಈಗಾಗಲೇ ತೀವ್ರ ಸ್ವರೂಪದಲ್ಲಿ ಕಂಡುಬಂದಿದ್ದಲ್ಲಿ, ಮೊಗ್ಗು ಮತ್ತು ತಿರಿ ಕೊಳೆತದಿಂದ ಮರಗಳನ್ನು ರಕ್ಷಿಸಲು ಈ ಎರಡು ಭಾಗಗಳಿಗೆ ಸಿಂಪಡಿಸಬೇಕು. ಬೇರೆ ಯಾವುದೇ ಶಿಲೀಂಧ್ರನಾಶಕ, ಕೀಟನಾಶಕ ಯಾ ಪೆÇೀಷಕಾಂಶಗಳನ್ನು ಇದರೊಂದಿಗೆ ಮಿಶ್ರಣ ಮಾಡದಿರುವಂತೆಯೂ ಸೂಚಿಸಲಾಗಿದೆ. ಬೋರ್ಡೆಕ್ಸ್ ಮಿಶ್ರಣವನ್ನು ತಯಾರಿಸಬೇಕು, ತಯಾರಿಕೆಯ ಪಿಎಚ್ ತಟಸ್ಥವಾಗಿರಬೇಕು (ಪಿಎಚ್7) ಮತ್ತು ಸ್ಪ್ರೇ ತಯಾರಿಯಲ್ಲೂ ನಿಗದಿತ ಪ್ರಮಾಣ ಕಚಿತಪಡಿಸಿಕೊಳ್ಳುವಂತೆಯೂ ಸಊಚಿಸಲಾಗಿದೆ.
ಇನ್ನು ತೋಟದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಳ್ಳುವುದರ ಜತೆಗೆ ತೋಟದಲ್ಲಿ ಬಿದ್ದ ರೋಗಪೀಡಿತ ಕಾಯಿಗಳನ್ನು ತೆರವುಗೊಳಿಸಬೇಕು.
ಸೆಪ್ಟೆಂಬರ್‍ನಲ್ಲಿ ಡಾಲಮೈಟ್ ಅಥವ ಸುಣ್ಣವನ್ನು ಪ್ರತಿ ಮರಕ್ಕೆ 1 ಕೆಜಿ (ಅಥವಾ ಮಣ್ಣಿನ ಪರೀಕ್ಷೆಯ ಮೌಲ್ಯಗಳ ಆಧಾರದ ಮೇಲೆ)ನೀಡಿದ ಎರಡು-ಮೂರು ವಾರಗಳ ನಂತರ ಶಿಫಾರಸು ಮಾಡಿದ ಗೊಬ್ಬರ ಅಂದರೆ 150 ಗ್ರಾಂ ಯೂರಿಯಾ, 130 ಗ್ರಾಂ ರಾಕ್ ಫಾಸ್ಫೇಟ್ ಮತ್ತು 160 ಗ್ರಾಂ ಮ್ಯೂರಿಯೇಟ್ ಆಫ್ ಪೆÇಟ್ಯಾಷ್ ಮತ್ತು ಪ್ರತಿ ಮರಕ್ಕೆ 12 ಕೆಜಿ ಎಫ್‍ವೈಎಂ ನೀಡುವಂತೆ ಸೂಚಿಸಲಾಗಿದೆ.