HEALTH TIPS

ಕಾರ್ಯಾಚರಣೆ ಬಳಿಕ ತೃಪ್ತರಾಗಿ ತೆರಳಿದ ಮೇಜರ್ ಜನರಲ್: ಅಭಿನಂದಿಸಿ ಬೀಳ್ಕೊಟ್ಟ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ

               ಕಲ್ಪಟ್ಟ: ಚುರಲ್‍ಮಳ, ಮುಂಡಕೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಅವರು ಇಂದು ಕಾರ್ಯಾಚರಣೆ ಕೊನೆಗೊಳಿಸಿ ಹಿಂತಿರುಗಿದ್ದಾರೆ. ನೂರಾರು ಜನರನ್ನು ಉಳಿಸುವ ಮಾರ್ಗವನ್ನು ತೆರೆದ  ಮೇಜರ್ ಜನರಲ್ ಅವರಿಗೆ ಪ್ರೀತಿ ಮತ್ತು ಗೌರವವನ್ನು ತಿಳಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮೂಲದ ಡಿ.ಆರ್. ಮೇಘಶ್ರೀ ಬೀಳ್ಕೊಟ್ಟರು. ಮ್ಯಾಥ್ಯೂ ಅವರು ಬೆಂಗಳೂರಿನಲ್ಲಿರುವ ಕೇರಳ ಮತ್ತು ಕರ್ನಾಟಕದ ಕೇಂದ್ರ ಕಚೇರಿಯಿಂದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

                ಜುಲೈ 30 ರಂದು ಮಧ್ಯಾಹ್ನ 12.30 ಕ್ಕೆ ಸೇನಾ ಘಟಕ ಆಗಮಿಸಿತ್ತು. ಮೊದಲ ಹಂತದಲ್ಲಿ ಹಲವು ಮಂದಿಯನ್ನು ರಕ್ಷಿಸಲಾಗಿತ್ತು. ಜುಲೈ 31 ರಂದು, ಕೇರಳ ಕರ್ನಾಟಕ ಜಿಒಸಿ (ಜನರಲ್ ಆಫೀಸರ್ ಕಮಾಂಡಿಂಗ್) ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಆಗಮಿಸಿದರು. ಮತ್ತು ರಕ್ಷಣಾ ಕಾರ್ಯಾಚರಣೆಯ ನಾಯಕತ್ವವನ್ನು ವಹಿಸಿದರು.  500 ಸದಸ್ಯರ ಪಡೆಯಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನ ಸೈನಿಕರು ಸೇರಿದ್ದರು, ಅವರು ಬೈಲಿ ಸೇತುವೆಯ ನಿರ್ಮಾಣದಲ್ಲಿ ಹೆಚ್ಚು ನುರಿತರಾಗಿದ್ದರು.

                  ಮೊದಲ ದಿನ ಸುಮಾರು 300 ಜನರನ್ನು ದುರಂತದ ಮುಖದಿಂದ ರಕ್ಷಿಸಲಾಗಿತ್ತು. . ಬೈಲಿ ಸೇತುವೆಯ ನಿರ್ಮಾಣವೂ ತಕ್ಷಣವೇ ಪ್ರಾರಂಭವಾಯಿತು. ಇದರೊಂದಿಗೆ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಕಾಲು ನಡೆಗೆಯ ಸೇತುವೆಯನ್ನೂ ನಿರ್ಮಿಸಲಾಗಿತ್ತು. ಅಂದಿನಿಂದ, ಕೇರಳೀಯರೂ ಆದ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಗಮನಾರ್ಹರಾಗಿ ಗುರುತಿಸಲ್ಪಟ್ಟರು.  ಅಪರಿಚಿತ ಸ್ಥಳದಲ್ಲೂ ಹೆಚ್ಚಿನ ಜನರನ್ನು ರಕ್ಷಿಸಲು ಮತ್ತು ದೊಡ್ಡ ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ನಡೆಸಿರುವುಉದ ತುಂಬಾ ತೃಪ್ತಿಕರವಾಗಿತ್ತು ಎಂದು ವಿ.ಟಿ. ಮ್ಯಾಥ್ಯೂ ಹೇಳಿದರು.

                ಇಡುಕ್ಕಿ ಜಿಲ್ಲೆಯ ತೊಡುಪುಳ ಮೂಲದವರು ವಿ.ಟಿ. ಮ್ಯಾಥ್ಯೂ. 11ನೇ ತರಗತಿವರೆಗೆ (1985) ತಿರುವನಂತಪುರಂ ಮಿಲಿಟರಿ ಶಾಲೆಯಲ್ಲಿ ಓದಿ ನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪುಣೆಯಲ್ಲಿ ಅಧ್ಯಯನ ಮತ್ತು ತರಬೇತಿ ಪಡೆದರು. ನಂತರ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದರು.

                   ಮೊದಲ ಬಾರಿಗೆ ಮದ್ರಾಸ್ ರೆಜಿಮೆಂಟ್ ಸೇರಿದರು. ಅವರು ಪಾಕಿಸ್ತಾನ ಗಡಿ (ಕಾಶ್ಮೀರ) ಮತ್ತು ಚೀನಾ ಗಡಿಯಲ್ಲಿ ಕಮಾಂಡಿಂಗ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

                   ಅವರಿಗೆ 2021 ರಲ್ಲಿ ರಾಷ್ಟ್ರಪತಿಗಳ ಯುದ್ಧ ಸೇವಾ ಪದಕ ಮತ್ತು 2023 ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ನೀಡಲಾಗಿತ್ತು. ಆಫ್ರಿಕಾದ ಸುಡಾನ್ ಮತ್ತು ಕಾಂಗೋ ದೇಶಗಳಲ್ಲಿ ಯುಎನ್ ಶಾಂತಿಪಾಲನಾ ಪಡೆಯ ಭಾಗವಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries