ಕುಂಬಳೆ: ಹಿರಿಯ ವಕೀಲ, ಕನ್ನಡಪರ ಹೋರಾಟಗಾರ, ಹಿರಿಯ ಸಾಂಸ್ಕøತಿಕ ಧುರೀಣ ಅಡೂರು ಉಮೇಶ ನಾಯ್ಕ್ ಅವರ ಪತ್ನಿ ಕಾಸರಗೋಡು ಕನ್ನಡ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ, ಕನ್ನಡಪರ ಕಾರ್ಯಕರ್ತೆ ಲಲಿತಾ ಅಡೂರು (88) ವಿದ್ಯಾನಗರದ ನಲ್ಕಳದ ಸ್ವಗೃಹ "ಮಾತ್ರೃಕೃಪಾ'ದಲ್ಲಿಶುಕ್ರವಾರ ನಿಧನರಾದರು. ಕಾಸರಗೋಡಿನಲ್ಲಿ ಮಹಿಳಾ ಸಂಘಟನೆ ಮೂಲಕ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಅವರು ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನ ಪತಿಯ ಜತೆ ಸಕ್ರಿಯರಾಗಿದ್ದರು. ಅವರು ಪತಿ, ಪುತ್ರಿ, ಇಬ್ಬರು ಪುತ್ರರುನ್ನು ಅಗಲಿದ್ದಾರೆ.