ಕಾಸರಗೋಡು: ನಗರದ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.ನ ದೇವಸ್ಥಾನದ ಪ್ರಧಾನ ಅರ್ಚಕ ಅನೀಶ್ ಕವಾತರ್ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು.
ಕ್ಷೇತ್ರ ಸಮಿತಿ ಅಧ್ಯಕ್ಷ ಎನ್. ಸತೀಶ್ ಧ್ವಜಾರೋಹಣ ನಡೆಸಿದರು. ಕ್ಷೇತ್ರ ಸಮಿತಿ ಗೌರವಾದ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್, ಗಣೇಶ್ ಪಾರೆಕಟ್ಟ, ಉಮೇಶ್, ಬಾಬು, ರಮೇಶ್, ನಿರ್ಮಲಾ, ಉಪೇಂದ್ರ, ಮಂಜುನಾಥ, ಅರವಿಂದ, ಸಜೇಶ್, ಸಉನಿಲ್‍ಕುಮಾರ್, ಸುಕೀರ್ತಿ, ಧನೇಶ್, ಶರತ್ ಮೊದಲಾದವರು ಉಪಸ್ಥಿತರಿದ್ದರು.