ಉಪ್ಪಳ: ಪೈವಳಿಕೆ ಲಾಲ್ ಭಾಗ್ ನ ಸುಭಾಷ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಿಕೆ ಚಿಪ್ಪಾರ್ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ಜರಗಿತು.
ಸಮಾರೋಪ ಸಮಾರಂಭವನ್ನು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಉದ್ಘಾಟಿಸಿದರು. ಹರೀಶ್ ಬೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಜೇಶ್ವರ ಶಾಸಕ ಕೆಎಂ ಅಶ್ರಫ್ ಮಾತನಾಡಿದರು ಅಥಿತಿಗಳಾಗಿ ಆಗಮಿಸಿದ ಚಂದ್ರಶೇಖರ ಕೆ, ರಣಜಿ ಕ್ರಿಕೆಟ್ ಆಟಗಾರ, ಸ್ನೇಹಾಲಯ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ಅಖಿಲೇಶ್ ನಗುಮುಗಮ್, ಸುನೀತಾ ವಲ್ಟಿ ಡಿ ಸೋಜ, ರಹಿಮತ್ ರಹಿಮಾನ್, ಪ್ರದೀಪ್ ಕುಮಾರ್, ಡಾ.ಕೆ. ಗಂಗಾಧರ್, ಕೆ.ನಾಗರಾಜ್, ಡಾ. ನಾಗೇಶ್ ಕೆ.ಎನ್., ಕೇಶವ ಬಾಯಿಕಟ್ಟೆ, ನಾಸಿರ್ ಕೊರಿಕ್ಕಾರ್, ಸಹದೇವ ನಾಯಕ್, ಶಾಲಿನಿ ಸನತ್ ರೈ ಕಳ್ಳಿಗೆ, ಗಣೇಶ್ ಪೂಜಾರಿ ಸ್ಥಾನದಮನೆ, ವಾಸುದೇವ ಶೆಟ್ಟಿಗಾರ್, ಗಣೇಶ್ ಸುಣ್ಣಾಡ, ಉಮ್ಮರ್ ಮಾಸಿಕುಮೇರಿ, ಮೂಸ ಮಾಸಿಕುಮೇರಿ, ವೆಂಕಪ್ಪ ಎಸ್. ಲಾಲ್ ಬಾಗ್ ಉಪಸ್ಥಿತರಿದ್ದು ಶುಭಹಾರೈಸಿದರು. ಸುಭಾಸ್ ಫ್ರೆಂಡ್ಸ್ ಗೌರವಾಧ್ಯಕ್ಷ ಅಶೋಕ್ ಎಂ ಸಿ ಲಾಲ್ ಬಾಗ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ್ ಸುವರ್ಣ ಲಾಲ್ ಬಾಗ್ ಸ್ವಾಗತಿಸಿ, ವಸಂತ ನಾಯ್ಕ್ ವಂದಿಸಿದರು. ಕುಮಾರಿ ಅಶ್ವಿನ್ ಪೆರುವಾಯಿ ನಿರೂಪಿಸಿದರು.
ರಾತ್ರಿ ನಡೆದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಡಿ ಕೆ ಬ್ರದರ್ಸ್ ಸುದೆಂಬಳ, ದ್ವಿತೀಯ ಎಸ್ ಎಂ ಫ್ರೆಂಡ್ಸ್ ಕಾರ್ಯಾಕಟ್ಟೆ, ತೃತೀಯ ಆಂಜನೇಯ ಕಣ್ವತೀರ್ಥ, ಚತುರ್ಥ ಬಿಕೆ ಬ್ರದರ್ಸ್ ಸ್ವರ್ಗ ಪಡೆದರು. ಬೆಳೆಗ್ಗಿನಿಂದ ಜಾನಪದ ನೃತ್ಯ, ಡೊಳ್ಳು ಕುಣಿತ, ಸುಗುಮ ಸಂಗೀತ, ಶಾಸ್ತ್ರೀಯ ನೃತ್ಯ., ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.