ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಹಾಡಿದರು. ಶಾಲಾ ಶಾಲಾ ವ್ಯವಸ್ಥಾಪಕ ಶಂಕರಮೋಹನ್ ಪೂಂಜ ಧ್ವಜಾರೋಹಣ ನಡೆಸಿದರು. ಪಿ. ಟಿ. ಎ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಿ. ಟಿ. ಎ ಮಾಜಿ ಅಧ್ಯಕ್ಷ ಗೋಪಾಲ ಪಜ್ವ ಅವರನ್ನು ಪಿ. ಟಿ. ಎ ವತಿಯಿಂದ ಸನ್ಮಾನಿಸಲಾಯಿತು. ಕೆನರಾ ಬ್ಯಾಂಕ್ ವರ್ಕಾಡಿ ಶಾಖೆ ಮ್ಯಾನೇಜರಾದ ಪ್ರವೀಣ್ ಕುಮಾರ್ ಅವರು ಎಸ್‍ಸಿ ಮತ್ತು ಎಸ್‍ಟಿ ವಿದ್ಯಾರ್ಥಿನೀಯರಿಗೆ ಡಾ. ಅಂಬೇಡ್ಕರ್ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಿಸಿದರು. ಹೈಯರ್ ಸೆಕಂಡರಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರೌಢಶಾಲೆಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಎಂ. ಪಿ. ಟಿ. ಎ ಅಧ್ಯಕ್ಷೆ ರಿಯಾನಾ ಉಪಾಧ್ಯಕ್ಷೆ ರೇಷ್ಮಾ ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಜಯಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಿಯಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶೀಕ್ಷಕಿ ಕೃಷ್ಣವೇಣಿ ಬಿ ವಂದಿಸಿದರು.