ಕಾಸರಗೋಡು : ನಗರದಲ್ಲಿ ಅಲೆಮಾರಿ ಜಾನುವಾರುಗಳಿಂದ ವಾಹನಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿದ್ದು, ಇದು ಜಾನುವಾರುಗಳ ಜೀವಕ್ಕೂ ಅಪಾಯ ತಂದೊಡ್ಡುತ್ತಿದೆ. ಈಗಾಗಲೇ ರೈಲು ಡಿಕ್ಕಿಯಾಗಿ ಜಾನುವಾರುಗಳು ಪ್ರಾಣಕಳೆದುಕೊಂಡ ಘಟನೆಯೂ ನಡೆದಿದೆ.
ನಗರದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಅಲೆದಾಡಲು ಬಿಡದೆ, ಸುರಕ್ಷಿತವಾಗಿ ಕಟ್ಟಿಹಾಕಬೇಕು. ಜಾನುವಾರುಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸುತ್ತಾಡುವುದು ಕಂಡುಬಂದರೆ ನಗರಪಾಲಿಕೆ ವಿಶೇಷ ತಂಡ ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಮಾಲೀಕರಿಂದ ದಂಡ ವಸೂಲಿ ಮಾಡಲಿದೆ. ತಪ್ಪಿದಲ್ಲಿ ಜಾನುವಾರುಗಳನ್ನು ಹರಾಜು ಮಾಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994230051)ಸಂಪರ್ಕಿಸುವಂತೆ ನಗರಸಭಾ ಕಚೇರಿ ಪ್ರಕಟಣೆ ತಿಳಿಸಿದೆ.