ಕಾಸರಗೋಡು: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಇಲಾಖೆಯ ಅಧೀನದಲ್ಲಿ ಮಾನ್ಯತೆ ಪಡೆದ ಎಂಜಿನಿಯರ್, ಮೇಲ್ವಿಚಾರಕ ಹುದ್ದೆಗಳಿಗೆ ಅರ್ಹರಾದ ಪರಿಶಿಷ್ಟ ವರ್ಗ ವಿಭಾಗಕ್ಕೆ ಸೇರಿದ ಯುವಕ ಯುವತಿಯರಿಂದ ಒಂದು ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣವಾಗಿ ತರಬೇತಿ ನೀಡುವ ಯೋಜನೆಯಾಗಿದೆ. ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಯಾಲಯದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಇ-ಕಚೇರಿಗೆ ಸಂಬಂಧಿಸಿ ಜ್ಯಾರಿಗೊಳಿಸುವುದು. ಐಟಿ ಸೆಲ್ ಮತ್ತು ಇ-ಗ್ರಾಂಟ್ಸ್ ಮೂಲಕ ಸೇವೆಗಳ ಹೆಚ್ಚು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಕಂಪ್ಯೂಟರ್ ಜ್ಞಾನವಿರುವ ಸಿಬ್ಬಂದಿ ಸೇವೆಯನ್ನು ಜನರಿಗೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 19 ಸಂಜೆ 5 ಗಂಟೆ ಕೊನೆಯ ದಿನಾಂಕವಾಗಿದೆ. ಅರ್ಜಿಯ ಮಾದರಿಯು ಟ್ರೈಬಲ್ ಎಕ್ಸ್ ಟೆನ್ಶನ್ ಆಫೀಸ್ ಪನತ್ತಡಿ, ಭೀಮನಡಿ ಎಂಬೆಡೆಗಳಲ್ಲಿ ಹಾಗೂ www.stdd.kerala.gov.in ವೆಬ್ ಸೈಟ್ ಮೂಲಕವೂ ಲಭಿಸುವುದು. ದೂರವಾಣಿ ಸಂಖ್ಯೆ- 0467 2960111