ತಿರುವನಂತಪುರ: ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ವಿ.ವೇಣು ಅವರು ನಿನ್ನೆ ನಿವೃತ್ತರಾದರು. ನೂತನ ಮುಖ್ಯ ಕಾರ್ಯದರ್ಶಿಯಾಗಿ ಅವರ ಪತ್ನಿ ಶಾರದಾ ಮುರಳೀಧರನ್ ಇಂದು ಅಧಿಕಾರ ಸ್ವೀಕರಿಸಿರುವರು. ಇಬ್ಬರೂ 1990ನೇ ಬ್ಯಾಚ್‍ನ ಐಎಎಸ್ ಅಧಿಕಾರಿಗಳು.
ಶಾರದಾ ಮುರಳೀಧರನ್ ಅವರು ಏಪ್ರಿಲ್ 2025 ರವರೆಗೆ ಅಧಿಕಾರಾವಧಿ ಹೊಂದಿದ್ದಾರೆ. ಮೊದಲು ವಿ. ರಾಮಚಂದ್ರನ್-ಪದ್ಮಾ ರಾಮಚಂದ್ರನ್ ಮತ್ತು ಬಾಬು ಜೇಕಬ್-ಲಿಜ್ಜಿ ಜೇಕಬ್ ಮುಖ್ಯ ಕಾರ್ಯದರ್ಶಿ ಸ್ಥಾನ ಅಲಂಕರಿಸಿದ್ದ ದಂಪತಿಗಳಾಗಿದ್ದರು. ಆದರೆ ಒಬ್ಬರ ನಂತರ ಇನ್ನೊಬ್ಬರು ನೇರ ಮುಖ್ಯ ಕಾರ್ಯದರ್ಶಿಯಾಗಿರುವುಉದ ಇದೇ ಮೊದಲು.
ಬಹುಮುಖ ವ್ಯಕ್ತಿತ್ವದ ಒಡೆಯ ಎಂದು ಮುಖ್ಯ ಕಾರ್ಯದರ್ಶಿ ಡಾ. ವಿ.ವೇಣು ಅವರ ವಿಶೇಷತೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೀಳ್ಕೊಡುಗೆ ಸಭೆಯಲ್ಲಿ ಹೇಳಿದರು. ವೈದ್ಯಕೀಯ ನಿಪುಣ, ನಾಟಕಕಾರ, ಅಧಿಕಾರಿ ಮತ್ತು ಹಲವು ಸಾಮಥ್ರ್ಯಗಳಲ್ಲಿ ಪ್ರಮುಖ ವ್ಯಕ್ತಿತ್ವ ವೇಣು ಅವರದ್ದು. ಇದು ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳಲ್ಲಿ ವಿರಳ ಎಂದು ಮುಖ್ಯಮಂತ್ರಿ ಹೇಳಿದರು. ಪತಿ ಮತ್ತು ಪತ್ನಿ ಇಬ್ಬರೂ ಇಲಾಖೆಗಳ ಮುಖ್ಯಸ್ಥರಾಗಿ ಹಲವರು ಆಗಿಹೋಗಿದ್ದಾರೆ. ಆದರೆ ಅವರೆಲ್ಲ ವಿವಿಧ ಸಮಯಗಳಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಗಂಡ-ಹೆಂಡತಿ ನಡುವೆ ವರ್ಗಾವಣೆ ಮಾಡುತ್ತಿರುವುದು ಕೇರಳದ ಇತಿಹಾಸದಲ್ಲಿ ಇದೇ ಮೊದಲು ಎಂದು ಮುಖ್ಯಮಂತ್ರಿ ಹೇಳಿದರು.