ಮಂಜೇಶ್ವರ: ವಾರ್ಡಿನ ಅಭಿವೃದ್ಧಿ ಬಗ್ಗೆ ಪಂಚಾಯಿತಿ ಆಡಳಿತ ಗಮನ ಹರಿಸದಿರುವುದನ್ನು ಖಂಡಿಸಿ, ಸ್ವತ: ಆಡಳಿತ ಪಕ್ಷದ ಸದಸ್ಯೆಯೊಬ್ಬರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಮಂಜೇಶ್ವರ ಗ್ರಾಮ ಪಂಚಾಯಿತಿಯ ಮುಸ್ಲಿಂಲೀಗ್ ಸದಸ್ಯೆ ಆಯಿಷತ್ ರುಬೀನಾ ಆತ್ಮಹತ್ಯೆಗೆ ಯತ್ನಿಸಿದವರು. ಪಂಚಾಯಿತಿ ಆಡಳಿತ ಸಮಿತಿ ಸಭೆಯ ಮಧ್ಯೆ ತಮ್ಮ ವಾರ್ಡಿನ ಅವಗಣನೆ ಬಗ್ಗೆ ಸದಸ್ಯೆ ಪ್ರಸ್ತಾಪಿಸಿದ್ದಾರೆ. ಎರಡು ಅಂಗನವಾಡಿ ಕಟ್ಟಡಗಳಿಗೆ ದೀರ್ಘ ಕಾಲದಿಂದ ಮೊತ್ತ ಮೀಸಲಿರಿಸದಿರುವುದನ್ನು ಪ್ರತಿಭಟಿಸಿದ ಸದಸ್ಯೆ ತಮ್ಮ ವಶದಲ್ಲಿದ್ದ ನಿದ್ದೆ ಗುಳಿಗೆಗಳನ್ನು ಸೇವಿಸಿದ್ದಾರೆ. ತಕ್ಷಣ ಪಮಚಾಯಿತಿ ಉಪಾಧ್ಯಕ್ಷ, ಸದಸ್ಯರು ಸಎರಿ ಇವರನ್ನು ಮಂಗಲ್ಪಾಡಿ ತಾಲೂಕು ಅಸ್ಪತ್ರೆಗೆ ದಾಖಲಿಸಿದ್ದು, ಉನ್ನತ ಚಿಕಿತ್ಸೆಗಾಗಿ ದೇರಳಕಟ್ಟೆಗೆ ಸ್ಥಳಾಂತರಿಸಲಾಗಿದೆ. ಆಯಿಷತ್ ರುಬೀನಾ ಚೇತರಿಸುತ್ತಿದ್ದಾರೆ.