ಹೆಣ್ಣು ಮಕ್ಕಳು ಕೂದಲಿನ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಹೀಗಾಗಿ ಬಿಳಿ ಕೂದಲನ್ನು ಮರೆಮಾಡುವ ಸಲುವಾಗಿ ಹೆನ್ನಾ ಅಥವಾ ಮೆಹಂದಿ ಹಚ್ಚುತ್ತಾರೆ. ಆದರೆ ಕೂದಲಿಗೆ ಮೆಹಂದಿ ಹಚ್ಚುವುದು ದೇಹಕ್ಕೆ ಎಷ್ಟು ತಂಪೋ ಅತಿಯಾದರೆ ನಾನಾ ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾದೀತು.

ಹೆಚ್ಚಿನವರು ಬಿಳಿ ಕೂದಲನ್ನು ಮರೆಮಾಚಲು ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇನ್ನು ಕೆಲವರು ಈ ಉತ್ಪನ್ನಗಳ ಸಹವಾಸವೇ ಬೇಡ ಎಂದು ಗೋರಂಟಿ ಅಥವಾ ಮೆಹಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅತಿಯಾದರೆ ಅಮೃತ ಕೂಡ ವಿಷ ಎನ್ನುವ ಮಾತಿನಂತೆ ಇದನ್ನು ಪ್ರತಿ ವಾರವು ತಲೆಗೆ ಹಚ್ಚಿಕೊಂಡರೆ ಅಡ್ಡಪರಿಣಾಮಗಳೇ ಹೆಚ್ಚಂತೆ.
ಹೀಗಾಗಿ ಮೆಹಂದಿಯನ್ನು ಕೂದಲಿಗೆ ಹಚ್ಚುವ ಮೊದಲು ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.