ಢಾಕಾ (PTI): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು ಮಂಗಳವಾರದಿಂದ ಪುನಃ ಕಾರ್ಯಾರಂಭಸಿತು.
ಭಾರತೀಯ ವೀಸಾ ಅರ್ಜಿ ಕೇಂದ್ರವು (ಐವಿಎಸಿ) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 'ಢಾಕಾದಲ್ಲಿ ಐವಿಎಸಿ ಪುನಃ ಕಾರ್ಯಾರಂಭಿಸಿದೆ.
ಸಂದೇಶ ಸ್ವೀಕರಿಸಿದ ನಂತರವಷ್ಟೇ ವೀಸಾ ಕೇಂದ್ರದ ಬಳಿ ಬರುವಂತೆ ಅದು ಮನವಿ ಮಾಡಿದೆ.
'ನಿಯಮಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ಪ್ರಕ್ರಿಯೆ ಪೂರ್ಣಗೊಳ್ಳಲು ಸುದೀರ್ಘ ಸಮಯ ಬೇಕಾಗಬಹುದು, ದಯವಿಟ್ಟು ಸಹಕರಿಸಿ' ಎಂದು ಕೋರಿದೆ.
ವಿವಾದಿತ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾದ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭಾರತಕ್ಕೆ ತೆರಳಿದ್ದರು.
ದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ನಂತರ ಎಲ್ಲಾ ವೀಸಾ ಕೇಂದ್ರಗಳನ್ನು ಮುಚ್ಚುವುದಾಗಿ ಐವಿಎಸಿ ಕಳೆದ ವಾರ ಘೋಷಿಸಿತ್ತು.