ತಿರುವನಂತಪುರಂ : ದೇವಸ್ಥಾನಗಳಿಗೆ ಭಾರಿ ಬಜೆಟ್ ರೂಪಿಸಿ ಕೋಟಿಗಟ್ಟಲೆ ವಂಚಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ.
ಶಬರಿಮಲೆಯ ಭಸ್ಮಕೆರೆ ಆಚಾರ ಮತ್ತು ನಂಬಿಕೆಗಳಿಗೆ ಸಂಬಂಧಿಸಿದೆ. ಸರ್ಕಾರ ಬೇರೊಂದು ಜಾಗದಲ್ಲಿ ನಿರ್ಮಿಸಲು ಯತ್ನಿಸುತ್ತಿದ್ದು ಯಾವುದೇ ಪ್ರಯೋಜನವಿಲ್ಲ. ಭ್ರಷ್ಟಾಚಾರಕ್ಕೆ ಬೆಂಬಲ ನೀಡಿ ಭಸ್ಮಕೆರೆ ಸ್ಥಳವನ್ನು ಬದಲಾಯಿಸಲಾಗಿಲ್ಲ ಎಂದು ಕುಮ್ಮನಂ ಹೇಳಿದ್ದಾರೆ.
ಹೇಮಾ ಸಮಿತಿ ವರದಿ ಆಘಾತಕಾರಿಯಾಗಿತ್ತು. ಕೇರಳದಲ್ಲಿ ಹೀಗಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರ ಸಂತ್ರಸ್ತರ ಪರ ವಕಾಲತ್ತು ವಹಿಸುತ್ತಿಲ್ಲ. ನಾಲ್ಕೂವರೆ ವರ್ಷ ಕಳೆದರೂ ಹೇಮಾ ಸಮಿತಿ ಬಗ್ಗೆ ಏನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರಿಸಿರುವÀರು. ಮುಖ್ಯಮಂತ್ರಿಯವರ ಕ್ರಮ ಅವಮಾನಕರವಾಗಿದೆ ಎಂದು ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ.