ಕೊಚ್ಚಿ: ಕೇರಳದ ಐದು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ರೆಡ್ ಅಲರ್ಟ್ ಘೋಷಿಸಿದೆ. ಇಡುಕ್ಕಿ, ಎರ್ನಾಕುಳಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ.
ತ್ರಿಶೂರ್ ವಡಕಂಚೇರಿ ಅಕಮಲದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ನಂತರ ವಡಕಂಚೇರಿ ಮುನ್ಸಿಪಲ್ ಕಾರ್ಪೋರೇಷನ್ ಪ್ರದೇಶದ ಜನರನ್ನು ಸ್ಥಳಾಂತರಿಸಲು ಸಲಹೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ಭೂಕುಸಿತ ಸಂಭವಿಸುವ ಸಂಭವವಿದ್ದು, ವಿವಿಧ ಇಲಾಖೆಗಳು ಜಂಟಿಯಾಗಿ ನಡೆಸಿದ ಪರಿಶೀಲನೆಯಲ್ಲಿ ಕಂಡುಬAದಿದೆ. 41 ಕುಟುಂಬಗಳಿಗೆ ಮಳೆಗಾಲ ಮುಗಿಯುವವರೆಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಅಲಪ್ಪುಳ, ಕೊಟ್ಟಾಯಂ, ತ್ರಿಶೂರ್, ಪಾಲಕ್ಕಾಡ್. ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಮತ್ತು ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ನದಿಗಳಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗವು ಆರೆಂಜ್ ಮತ್ತು ಯೆಲ್ಲೋ ಎಚ್ಚರಿಕೆಯನ್ನು ಘೋಷಿಸಿದೆ.
ಆರೆಂಜ್ ಅಲರ್ಟ್: ತ್ರಿಶೂರ್ ಜಿಲ್ಲೆಯ ಕರುವನ್ನೂರ್ (ಪಾಲಕ್ಕಡವ್ ಸ್ಟೇಷನ್) ಮತ್ತು ಗಾಯತ್ರಿ (ಕೊಂಡಾಜಿ ಸ್ಟೇಷನ್) ನದಿಗಳಿಗೆ ಕೇಂದ್ರ ಜಲ ಆಯೋಗವು ಆರೆಂಜ್ ಅಲರ್ಟ್ ಘೋಷಿಸಿದೆ.
ಹಳದಿ ಅಲರ್ಟ್: ಕೇಂದ್ರ ಜಲ ಆಯೋಗವು ತಿರುವನಂತಪುರ ಜಿಲ್ಲೆಯ ಕರಮಾನ (ವೆಳ್ಳೈಕಡವ್ ಸ್ಟೇಷನ್), ಇಡುಕ್ಕಿ ಜಿಲ್ಲೆಯ ತೊಡುಪುಳ (ಮಣಕಾಡ್ ಸ್ಟೇಷನ್), ತ್ರಿಶೂರ್ ಜಿಲ್ಲೆಯ ಕೇಚೇರಿ (ಕೊತ್ತಪುರಂ ಠಾಣೆ) ಮತ್ತು ಕಾಸರಗೋಡು ಜಿಲ್ಲೆಯ ಪಯಸ್ವಿನಿ (ಎರಿನ್ಹಿಪುಳ ಠಾಣೆ) ನದಿಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ಹಾಗಾಗಿ ಕರಾವಳಿ ತೀರದ ಜನರು ಜಾಗರೂಕರಾಗಿರಬೇಕು.