ಕಾಸರಗೋಡು: ನಿರಂತರ ಸುರಿಯುತ್ತಿದ್ದ ಬಿರುಸಿನ ಮಳೆಗೆ ಶನಿವಾರ ಹಗಲುಹೊತ್ತಲ್ಲಿ ಅಲ್ಪ ವಿರಾಮ ದೊರೆತಿದ್ದು, ಜನತೆ ಅಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಕೇರಳದ ಕರಾವಳಿಯಿಂದ ಗುಜರಾತ್ ಪ್ರಾಂತ್ಯದ ಕರಾವಳಿ ವರೆಗೆ ಆಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ಮೂರು ದಿವಸಗಳ ಕಾಲ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಈ ನಿಟ್ಟಿನಲ್ಲಿ ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾಗ್ರತಾ ನಿರ್ದೇಶ ಮುಂದುವರಿಸಲಾಗಿದೆ. ಬಿರುಸಿನ ಮಳೆಯಾಗಲಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಹಾಗೂ ಕಡಿದಾದ ಗುಡ್ಡದ ತಪ್ಪಲ್ಲಿ ವಆಸಿಸುತ್ತಿರುವವರು ಜಾಗ್ರತೆ ಪಾಲಿಸಬೇಕು. ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕಕೆ ತೆರಳದಂತೆಯೂ ಸೂಚಿಸಲಾಗಿದೆ.