ಕಾಸರಗೋಡು: ಜಿಲ್ಲೆ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನ-2024ನ್ನು 2024 ಸೆಪ್ಟೆಂಬರ್ 2ನೇ ವಾರದಲ್ಲಿ ಸುರತ್ಕಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ನಡೆಯಲಿರುವುದು.
ಸಮ್ಮೇಳನದ ಗೋಷ್ಠಿಗಾಗಿ ಪ್ರಾಥಮಿಕದಿಂದ ಪ್ಲಸ್ ಟು ಅಥವಾ ಪದವಿಪೂರ್ವ ತನಕದ ಆಸಕ್ತ ವಿದ್ಯಾರ್ಥಿಗಳಿಂದ ಸ್ವತಂತ್ರ, ಸ್ವರಚಿತ ಕಥೆ ಹಾಗೂ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ವರಚಿತ ಬರಹಗಳನ್ನು ಪೆÇ್ರ. ರಮೇಶ್ ಭಟ್ ಎಸ್ ಜಿ, ಕಾರ್ಯದರ್ಶಿ, ಮಕ್ಕಳ ಸಾಹಿತ್ಯ ಸಂಗಮ, ಶ್ರೀನಿಕೇತನ, 1-194(1), ಎನ್ ಎಂ ಪಿ ಟಿ ಕಾಲನಿಯ ಹಿಂಭಾಗ, ಕಡಂಬೋಡಿ, ಹೊಸಬೆಟ್ಟು, ಕುಳಾಯಿ ಅಂಚೆ, ಸುರತ್ಕಲ್ - 575019 ವಿಳಾಸಕ್ಕೆ 2024 ಆಗಸ್ಟ್ 20ರ ಮೊದಲು ತಲುಪುವಂತೆ ಅಂಚೆಕಾರ್ಡಿನಲ್ಲೇ ಬರೆದು ಕಳುಹಿಸಬೇಕು. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9449452326)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.