ಮಂಜೇಶ್ವರ: ಬಿಜೆಪಿ-ಯುವಮೋರ್ಚಾ ಮಂಜೇಶ್ವರ ಮಂಡಲ ವತಿಯಿಂದ ಸ್ವತಂತ್ರ ರಕ್ಷಣೆ, ಸದೃಢ ಭಾರತ ಅಂಗವಾಗಿ ತಿರಂಗ ಬೈಕ್ ರ್ಯಾಲಿ ಭಾನುವಾರ ಹೊಸಂಗಡಿಯಲ್ಲಿ ಉದ್ಘಾಟನೆಗೊಂಡು ಸಂಚರಿಸಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿದರು. ಅವಿನಾಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ, ಯುವಮೋರ್ಚಾ ಜಿಲ್ಲಾಧ್ಯಕ್ಷೆ ಅಂಜು ಜೋಷ್ಟಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಹೊಸಂಗಡಿ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ, ಕೆ.ವಿ.ಭಟ್, ಯತೀರಾಜ್ ಶೆಟ್ಟಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಹರಿಶ್ಚಂದ್ರ ಎಂ ನೇತೃತ್ವ ವಹಿಸಿದ್ದರು. ರಕ್ಷಣ್ ಅಡಕಳ ಸ್ವಾಗತಿಸಿದರು.
ಬೈಕ್ ರ್ಯಾಲಿ ಹೊಸಂಗಡಿ ಮಿಯಪದವು ಪೈವಳಿಕೆ ದಾರಿಯಾಗಿ ಕುಂಬಳೆಯಲ್ಲಿ ಸಮಾಪನಗೊಂಡಿತು.ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ನ್ಯಾಯವಾದಿ ವಿ.ರವೀಂದ್ರನ್ ಸಮಾರೋಪ ಭಾಷಣ ಮಾಡಿದರು.