ನವದೆಹಲಿ: ಪ್ರಾಥಮಿಕ ಹಂತಗಳನ್ನು ಹೊರತುಪಡಿಸಿ ಕೆ ರೈಲ್ ಸಿಲ್ವರ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಜಾನ್ ಬ್ರಿಟ್ಟಾಸ್ ಅವರಿಗೆ ಉತ್ತರಿಸಿದರು.
ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ಮಾಹಿತಿ ವರದಿ) ಸಿದ್ಧಪಡಿಸಲು ಮಾತ್ರ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ದೇಶದ ಇಂತಹ ಯೋಜನೆಗಳಲ್ಲಿ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗೆ ಮಾತ್ರ ಅನುಮತಿ ದೊರೆತಿದೆ ಎಂದು ಸಚಿವರು ಮಾಹಿತಿ ನೀಡಿದರು. ಸಿಲ್ವರ್ ಲೈನ್ ಯೋಜನೆ ವಿರುದ್ಧ ವ್ಯಾಪಕ ವಿರೋಧವಿದ್ದರೂ ಅದನ್ನು ಯಾವುದೇ ಬೆಲೆ ತೆತ್ತಾದರೂ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಲೂ ಪುನರುಚ್ಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬೆಂಬಲವಿದ್ದು, ರೈಲ್ವೆ ಸಚಿವಾಲಯದಿಂದ ಅನುಮತಿ ದೊರೆತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ.