HEALTH TIPS

ರೈತರ ಪ್ರತಿಭಟನೆ ಬಾಂಗ್ಲಾ ಮಾದರಿಯ ಹಿಂಸಾಚಾರ ಸೃಷ್ಟಿಸುವುದಾಗಿತ್ತು: ಕಂಗನಾ

            ವದೆಹಲಿ: 'ರೈತರು ತಿಂಗಳಾನುಗಟ್ಟಲೆ ನಡೆಸಿದ ಪ್ರತಿಭಟನೆಯಲ್ಲಿ ಹೆಣಗಳು ನೇತಾಡುತ್ತಿದ್ದವು. ಅತ್ಯಾಚಾರಗಳು ನಡೆದಿವೆ. ಬಾಂಗ್ಲಾದೇಶ ಮಾದರಿಯ ಅರಾಜಕತೆ ಸೃಷ್ಟಿಗೆ ಇಲ್ಲಿ ಯೋಜನೆ ನಡೆದಿತ್ತು' ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ.



           'ಸೇನೆ ಹಾಗೂ ಪೊಲೀಸರು ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ನಡೆಯಿತಲ್ಲಾ ಅದು ಇಲ್ಲಿ ಸಂಭವಿಸಲು ಹೆಚ್ಚು ಸಮಯ ಬೇಕಿರಲಿಲ್ಲ. ರೈತರ ಮಸೂದೆ ವಾಪಾಸ್ ಪಡೆದ ನಂತರವೂ ಅವರು ಅಲ್ಲಿ ಕುಳಿತಿದ್ದರು. ಅವರಿಗೆ ಮಸೂದೆ ಹಿಂಪಡೆಯುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ' ಎಂದಿದ್ದಾರೆ.

'ಚೀನಾ, ಅಮೆರಿಕದಂತ ವಿದೇಶಿ ಶಕ್ತಿಗಳು ಇಂಥ ಹೋರಾಟಗಳ ಹಿಂದೆ ಕೆಲಸ ಮಾಡುತ್ತಿವೆ. ಆದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೂ, ಸಿನಿಮಾದವರ ಅಂಗಡಿ ನಡೆಯುತ್ತಲೇ ಇರಬೇಕು ಎಂಬ ಧೋರಣೆ ಇವರದ್ದು. ಆದರೆ ದೇಶವೇ ಹಾಳಾದರೆ, ಇವರೂ ಹಾಳಾಗುತ್ತಾರೆ ಎಂಬ ಸತ್ಯವನ್ನು ಇವರಿಗೆ ನಿತ್ಯ ಮನವರಿಕೆ ಮಾಡಿಕೊಡಬೇಕಿದೆ' ಎಂದು ಕಂಗನಾ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries