ಕಾಸರಗೋಡು: ಉದುಮ ಎರೋಳ್ ಶ್ರೀಹರಿ ಹಾಗೂ ಪಂಚಿಕೊಲ ಶ್ರೀ ಶಾರದಾಂಬಾ ಬಾಲಗೋಕುಲಂ ನೇತೃತ್ವದಲ್ಲಿ ಗೋಪೂಜೆ ನಡೆಯಿತು. ದಾಮೋದರ ಆಚಾರ್ಯ ಅವರ ನೇತೃತ್ವದಲ್ಲಿ ಸಮಾರಂಭ ನಡೆಯಿತು. ಶ್ರೀಕೃಷ್ಣ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ವೈ.ಶಿವರಾಮನ್, ಶ್ರೀಹರಿ ಸೇವಾ ಸಮಿತಿ ಅಧ್ಯಕ್ಷ ಉಪೇಂದ್ರನ್ ಆಚಾರಿ, ಬಾಲಮಿತ್ರಂ ಪಿ. ಬಿ. ಕಿರಣ್, ಕೆ. ಬಾಲಕೃಷ್ಣ, ಸಂತೋಷ್ ಕೆ. ವೈ, ಸತೀಶನ್ ಕಿಯಕ್ಕೇಕರ, ಚಂದ್ರನ್ ವಡಕ್ಕೇಕರ, ವೈ. ಕೃಷ್ಣದಾಸ್, ಶಿವಲಕ್ಷ್ಮಿ, ದಿವ್ಯಾಬಿನು, ಅರ್ಪಿತಾ ಮೊದಲಾದವರು ಉಪಸ್ಥಿತರಿದ್ದರು.