ನವದೆಹಲಿ: ಫ್ಲ್ಯಾಟ್‌ನ ಗೋಡೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಬರೆದ ವ್ಯಕ್ತಿಯನ್ನು ದೆಹಲಿ ರೋಹಿಣಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನವದೆಹಲಿ: ಫ್ಲ್ಯಾಟ್‌ನ ಗೋಡೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಬರೆದ ವ್ಯಕ್ತಿಯನ್ನು ದೆಹಲಿ ರೋಹಿಣಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
'ರೋಹಿಣಿಯ ಅವಂತಿಕ- ಸಿ ಬ್ಲಾಕ್‌ನ ನಿವಾಸಿ ತನ್ನ ಫ್ಲ್ಯಾಟ್ ಗೋಡೆಯಲ್ಲಿ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಬರೆದಿದ್ದಾನೆ ಎನ್ನುವ ಮಾಹಿತಿ ಬಂತು.
ಪಾಕಿಸ್ತಾನ ಅಥವಾ ಇನ್ಯಾವುದೇ ಸಂಘಟನೆ ಜೊತೆಗೆ ವ್ಯಕ್ತಿಗೆ ಸಂಬಂಧ ಇದೆಯೇ ಎನ್ನುವುದರ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆತನ ಕುಟುಂಬದ ಸದಸ್ಯರನ್ನು ಸಂಪರ್ಕಿಸಲಾಗಿದೆ. ಅವರ ಕೋಣೆಯಿಂದ ಆಕ್ಷೇಪಾರ್ಹ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫ್ಲ್ಯಾಟ್‌ನ ಗೋಡೆಯಲ್ಲಿ ಇರುವ ಆಕ್ಷೇಪಾರ್ಹ ಬರಹಗಳ ವಿಡಿಯೊವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.