ತಿರುವನಂತಪುರಂ: ಭಾರತವನ್ನು ಬ್ರಿಟಿಷರು ಒಗ್ಗೂಡಿಸಿದರು ಎಂಬುದು ಅಸಂಬದ್ಧ ಎಂದು ಗೋವಾ ರಾಜ್ಯಪಾಲ ಅಡ್ವ ಪಿ.ಎಸ್.ಶ್ರೀಧರನ್ ಪಿಳ್ಳೈ ಅಭಿಪ್ರಾಯಪಟ್ಟರು. ಭಾರತ ಎಂದಿಗೂ ಒಂದೇ ಆಗಿತ್ತು. ಇದು ಪ್ರಾಚೀನವಾದುದು. ಇದು ಶಾಶ್ವತ ಎಂದರು.
ಅವರು ಕೇಸರಿಯ ಬ್ರಿಡ್ಜಿಂಗ್ ಸೌತ್ ಕಾನ್‍ಕ್ಲೇವ್ ಅನ್ನು ಉದ್ಘಾಟಿಸಿದರು.
ಧರ್ಮವೇ ರಾಜ್ಯದ ಆಧಾರ ಎಂಬುದನ್ನು ಒಪ್ಪುವುದಿಲ್ಲ. ಭಾರತವು ಅಧ್ಯಾತ್ಮವನ್ನು ನಿರಾಕರಿಸದ ರಾಷ್ಟ್ರೀಯತೆಯನ್ನು ಹೊಂದಿದೆ. ವೈವಿಧ್ಯತೆಯು ನಮ್ಮ ಏಕತೆಯ ಬೀಜವಾಗಿದೆ. ಅದನ್ನು ಪಾಲನೆ ಮಾಡಬೇಕು ಎಂದು ಶ್ರೀಧರನ್ ಪಿಳ್ಳೆ ಹೇಳಿದರು. ಕೇರಳದ ಅನನುಕೂಲವೆಂದರೆ ಅದು ರಾಷ್ಟ್ರೀಯತೆಯ ಬಗ್ಗೆ ಏನನ್ನೂ ಚರ್ಚಿಸಲು ಆಸಕ್ತಿಯಿಲ್ಲದ ರಾಜ್ಯವಾಗಿ ಮಾರ್ಪಟ್ಟಿದೆ. ಇಲ್ಲಿ ರಚನಾತ್ಮಕ ಚರ್ಚೆಗಳ ಬದಲಾಗಿ ನಕಾರಾತ್ಮಕ ಚರ್ಚೆಗಳು ನಡೆಯುತ್ತವೆ. ಸಮಸ್ಯೆಯೆಂದರೆ ಶ್ರೀ ನಾರಾಯಣ ಗುರುದೇವರು ಆಧ್ಯಾತ್ಮಿಕ ಕೇರಳವನ್ನು ತಿರಸ್ಕರಿಸಿದರು ಮತ್ತು ಕ್ರಾಂತಿಯನ್ನು ಸ್ವೀಕರಿಸಿದರು ಎಮದರು.
ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಜನರನ್ನು ವಿಭಜಿಸುವುದು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ತಂತ್ರವಾಗಿದೆ ಮತ್ತು ಸೌತ್ ಕಾನ್‍ಕ್ಲೇವ್ ಅನ್ನು ಸೇತುವೆಯಾಗಿಸಿ ವಿಭಜನೆ ತಂತ್ರ ತಡೆಯುವುದು ರಕ್ಷಣೆಯಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಜೆ.ನಂದಕುಮಾರ್, ಭಾರತೀಯತೆ, ರಾಷ್ಟ್ರೀಯತೆ ಇಲ್ಲದ ಕೇರಳ ಅಪಾಯಕಾರಿ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಎಲ್ಲೆಲ್ಲಿ ರಾಷ್ಟ್ರೀಯತೆ ಸವೆದು ಹೋಗಿದೆಯೋ ಅಲ್ಲೆಲ್ಲ ಅದು ಭಾರತಕ್ಕೆ ಸೇರಿದ್ದಲ್ಲ. ಕೆಲವರು ಸುಳ್ಳು ರಾಜಕೀಯ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಾರತದಲ್ಲಿ ವಿಭಜನೆಯ ಬೀಜಗಳನ್ನು ಬಿತ್ತುತ್ತಿದ್ದಾರೆ. ಭಾರತವು ಇತಿಹಾಸಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅದನ್ನು ಯಾರೂ ವಿಭಜಿಸಲು ಸಾಧ್ಯವಿಲ್ಲ. ಇಂತಹ ಸಮಾವೇಶವು ಭಾರತೀಯರನ್ನೆಲ್ಲರಿಗೆ ಕರೆನೀಡುವ ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ವಿರುದ್ಧವಾಗಿದೆ ಎಂದು ನಂದಕುಮಾರ್ ಹೇಳಿದ್ದಾರೆ.
ಮಾಜಿ ರಾಯಭಾರಿ ಡಾ. ಟಿಪಿ ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಕೇಸರಿ ಪ್ರಧಾನ ಸಂಪಾದಕ ಡಾ.ಎನ್. ಆರ್. ಮಧು, ಡಾ. ಕೆ. ಎನ್ ಮಧುಸದನನ್ ಪಿಳ್ಳೈ ರಾಣಿ ಮೋಹನ್ ದಾಸ್ ಮಾತನಾಡಿದರು.