ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಸಮಾರಂಭದ ಅಂಗವಗಿ ಶ್ರೀಮಠದ ಪೂರ್ವ ವ್ಯವಸ್ಥಾಪಕ ಎಡನೀರು ರಾಮಕೃಷ್ಣ ರಾವ್ ಸೃತಿ ಗೌರವ ಹಾಗೂ ಸನ್ಮಾನ ಸಮಾರಂಭ ಆ. 15ರಂದು ಸಂಜೆ 5ಕ್ಕೆ ಶ್ರೀ ಮಠದಲ್ಲಿ ಜರುಗಲಿರುವುದು.
ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸಂಸ್ಮರಣಾ ಭಾಷಣ ಮಾಡುವರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಅವರಿಗೆ ಸನ್ಮಾನ ಸಮಾರಂಭ ನಡೆಯುವುದು. ಕಾಟುಕೊಚ್ಚಿ ಕುಞÂಕೃಷ್ಣನ್ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.