ಕಾಸರಗೋಡು: ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಆಚರಣೆಯಲ್ಲಿ 3ಸಾವಿರಕಕೂ ಹೆಚ್ಚು ಇ-ಸಿಗರೇಟ್ ವಶಪಡಿಸಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ಕೇಂದ್ರೀಕರಿಸಿ ಮಾದಕದ್ರವ್ಯ ಒಳಗೊಂಡ ಇ-ಸಿಗರೇಟ್ ಇದಾಗಿದ್ದ್ದು, ಕಾಸರಗೋಡು ಜಿಲ್ಲೆಯಲ್ಲಿ ಪಊರೈಸಲು ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ನಿವಾಸಿಗಳಾದ ಮಹಮ್ಮದ್ ಶೆರೀಫ್ ಹಾಗೂ ಮಹಮ್ಮದ್ ಬಶೀರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಚಂದ್ರಗಿರಿ ಜಂಕ್ಷನ್ ಬಳಿ ಪೆಟ್ರೋಲಿಂಗ್ ನಡೆಸುವ ಮಧ್ಯೆ ರಸ್ತೆ ಅಂಚಿಗೆ ನಿಂತಿದ್ದ ಕಾರಿನ ಟಯರ್ ಬದಲಾಯಿಸುತ್ತಿದ್ದವರನ್ನು ವಿಚಾರಿಸಿದಾಗ ಅವರ ಮುಖದಲ್ಲಿ ಆತಂಕ ಹಾಗೂ ಭಯದ ಛಾಯೆ ಕಂಡುಬಂದ ಹಿನ್ನೆಲೆಯಲ್ಲಿ ಕಾರನ್ನು ತಪಾಸಣೆ ನಡೆಸಿದಾಗ ಇ-ಸಿಗರೇಟ್ ಕಂಡು ಬಂದಿದೆ. ಕಾಸರಗೋಡಿನ ವಿವಿಧೆಡೆ ಪೂರೈಕೆಗಾಗಿ ಮಲಪ್ಪುರಂನಿಂದ ಇ-ಸಿಗರೇಟ್ ತರಲಾಗಿದ್ದು, ವಿವಿಧ ಕೇಂದ್ರಗಳಿಗೆ ತಲುಪಿಸಲು ಯೋಜನೆಯಿರಿಸಲಾಗಿತ್ತು.
ಕಾರಿನ ಟಯರ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಟಯರ್ ಬ್ಲಾಯಿಸಲು ನಿಂತಿದ್ದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಇ-ಸಿಗರೇಟ್ ಪತ್ತೆಯಾಗಿತ್ತು.