ನವದೆಹಲಿ: ಪ್ರಸಕ್ತ ಸಾಲಿನ 'ಐಎನ್‌ಐ ಸಂಯುಕ್ತ ಪ್ರವೇಶ ಪರೀಕ್ಷೆ' (ಐಎನ್‌ಐ-ಸಿಇಟಿ) ಫಲಿತಾಂಶ ಘೋಷಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನವದೆಹಲಿ: ಪ್ರಸಕ್ತ ಸಾಲಿನ 'ಐಎನ್‌ಐ ಸಂಯುಕ್ತ ಪ್ರವೇಶ ಪರೀಕ್ಷೆ' (ಐಎನ್‌ಐ-ಸಿಇಟಿ) ಫಲಿತಾಂಶ ಘೋಷಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ, ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು.
'ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟನ್ಸ್' (ಐಎನ್‌ಐ)ನ ಸ್ನಾತಕೋತ್ತರ ಕೋರ್ಸ್‌ಗಳ ಸೀಟು ಹಂಚಿಕೆಗೆ ಸಂಬಂಧಿಸಿದ ಸಿಇಟಿ ಫಲಿತಾಂಶವನ್ನು ಪ್ರಕಟಿಸದಂತೆ ತಡೆ ನೀಡುವಂತೆ ಕೋರಿ ಡಾ.ಸುಕೃತಿ ನಂದ ಎಂ. ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಪಿ.ಬಿ.ಸುರೇಶ್ ಹಾಘೂ ವಿಪಿನ್ ನಾಯರ್ ವಾದ ಮಂಡಿಸಿದರು.