ಕಾಸರಗೋಡು : ಶ್ರೀಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಡಿಸೆಂಬರ್ 16ರಿಂದ 19ರ ವರೆಗೆ ಜರಗುವ ಕೋಟಿ ಪಂಚಾಕ್ಷರಿ ಜಪ ಯಜ್ಞ ಹಾಗೂ ಶ್ರೀಚಕ್ರಪೂಜೆಯ ಸಿದ್ಧತೆಗಾಗಿ ವಿಶೇಷ ಸಭೆ ನಡೆಯಿತು.ಸಮಿತಿ ಕಾರ್ಯಧ್ಯಕ್ಷ ಶ್ರೀರಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಸಮಿತಿಯ ಅಧ್ಯಕ್ಷ ಡಾ.ಅನಂತ ಕಾಮತ್, ಸಮಿತಿಯ ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಟ್ರಸ್ಟಿ ಬೋರ್ಡ್ ಅಧ್ಯಕ್ಷರಾದ ನ್ಯಾಯವಾದಿ ಗೋವಿಂದ ನಾಯರ್, ಸಿ.ವಿ.ಪೊದುವಾಳ್, ಪಿ.ರಮೇಶ್ ಸೂಕ್ತ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಮಹಿಳಾ ಸಮಿತಿ ರಚಿಸಲಾಯಿತು.ಶಾರದ ರಾವ್ ಅಧ್ಯಕ್ಷೆ, ಶೈಲಜಾ ಕಡಪ್ಪುರ (ಕಾರ್ಯದರ್ಶಿ), ಪ್ರಚಾರ ಸಮಿತಿ ಕಾರ್ಯದರ್ಶಿ ಕಿಶೋರ್ ಎಸ್.ವಿ.ಟಿ, ಅವರನ್ನು ಆಯ್ಕೆ ಮಾಡಲಾಯಿತು.ಶ್ರೀಕ್ಷೇತ್ರ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಗೋವಿಂದ ನಾಯರ್ ಅವರು ಕೋಟಿ ಜಪ ಯಜ್ಞ ಸಮಿತಿಯ ಅಧ್ಯಕ್ಷ ಡಾ.ಅನಂತ ಕಾಂತ್ ಅವರಿಗೆ ಪ್ರಥಮ ಮನವಿ ಪತ್ರದ ಪ್ರತಿಯನ್ನು ನೀಡಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕೆ.ಎನ್.ರಾಮಕೃಷ್ಣ ಹೊಳ್ಳ, ಸಾಯಿನಾಥ್ ರಾವ್, ರವಿ ಕೇಸರಿ, ಉಷಾ ಅರ್ಜುನ್, ಮನೋಜ್,ಶ್ರೀದೇವಿ, ಸವಿತಾ,ಶ್ರೀವಳ್ಳಿ, ಅರುಣಾ,ಪುರಂದರ ಶೆಟ್ಟಿ,ಪ್ರೇಮಾ,ಮೀರಾ ಕಾಮತ್, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಹರೀಶ್ ಎಸ್ ವಿ ಟಿ ಸ್ವಾಗತಿಸಿ ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ವಂದಿಸಿದರು.