ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕ್ ಪಾವೂರು ಶಾಖೆಯಲ್ಲಿ ಕೃಷಿಕರ ದಿನ ಆಚರಿಸಲಾಯಿತು. ಬ್ಯಾಂಕ್ ಪ್ರಬಂಧಕ ಮಹಮ್ಮದ್ ಪೀರ್ ಅಧ್‍ಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಪೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ನೆರವೇರಿಸಿದರು. ಮಹಾಲಿಂಗೇಶ್ವರ ಭಟ್ ಪಾವೂರು, ಇಸ್ಮಾಯಿಲ್ ಜಮಾಲ್ ಪಾವೂರು ಅವರನ್ನು ಸಮ್ಮಾನಿಸಲಾಯಿತು.. ಕಾರ್ಯಕ್ರಮದಲ್ಲಿ ಮಹಮ್ಮದ್ ಕುಂಡಾಪು, ಉಮೇಶ ಕೊಪ್ಪಳ, ಬ್ಯಾಂಕ್ ಸಿಬ್ಬಂದಿಗಳಾದ ಶಾನೇಶ್ ಅಶೋಕ ಆಚಾರಿ ಹಾಗೂ ಹಲವು ಕೃಷಿಕರು ಉಪಸ್ಥಿತರಿದ್ದರು ವೀಣಾ ಸ್ವಾಗತಿಸಿ, ರಜಿನ್ ವಂದಿಸಿದರು.