ಮಂಜೇಶ್ವರ: ಅದೊಂದು ಬಹು ಸಂಭ್ರಮದ ಕಾರ್ಯಕ್ರಮ. ಆಶ್ರಮವಾಸಿಗಳೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರೆನ್ನದೆ ಎಲ್ಲರೂ ಹಾಡಿಗೆ ಹೆಜ್ಜೆ ಹಾಕಿ, ತಾವು ಹಾಡು ಹಾಡಿ ಕುಣಿದರಲ್ಲದೆ ಆಶ್ರಮದ ಕಾರ್ಯಚಟುವಟಿಕೆ, ಶ್ರಮದಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವಾ ಮನೋಧರ್ಮವನ್ನು ಮೆರೆದರು.
ಇಂಥದೊಂದು ಸಂಭ್ರಮ ಕಂಡುಬಂದದ್ದು ಶ್ರೀ ಸಾಯಿನಿಕೇತನ ಸೇವಾ ಸಂಸ್ಥೆ ದೈಗೋಳಿಯಲ್ಲಿ. ಈ ವಿನೂತನ ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಕಾಲೇಜ್ ಕೊಡಿಯಾಲ್‍ಬೈಲ್ ಇದರ ಸಾಮಾಜಿಕ ಕಾಳಜಿ ವಿಭಾಗದ ವಿದ್ಯಾರ್ಥಿಗಳು ಧÀಸಹಾಯ ಕಾರ್ಯಕ್ರಮದ ಅಂಗವಾಗಿ ಆಶ್ರಮದಲ್ಲಿ ನಡೆಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಸಾಯಿನಿಕೇತನ ಸಂಸ್ಥೆಯ ಅಧ್ಯಕ್ಷ ಡಾ.ಉದಯಕುಮಾರ್ ಅವರು, ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚೆಚ್ಚು ನಾವು ಸೇವಾ ಮನೋ ಧರ್ಮವನ್ನು ಬೆಳೆಸಿದಾಗ ಅವರು ಸಮಾಜದ ಆಸ್ತಿಯಾಗಿ ಪರಿವರ್ತಿತರಾಗುತ್ತಾರೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಜರುಗಲಿ ಎಂದು ಆಶಿಸಿದರು.
ಆಶ್ರಮದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಆಶ್ರಮದ ಸಿಬ್ಬಂದಿ ವರ್ಗ, ನಾಗರಿಕರು ಎಲ್ಲರೊಂದಿಗೆ ಬೆರೆತು ಸಂಭ್ರಮಿಸಿದರು.