ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮವಿಠಲ ದೇವಾಲಯದಲ್ಲಿ ಶುಕ್ರವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನಾಗರಪಂಚಮಿ ಉತ್ಸವ ನಡೆಯಿತು. ಕ್ಷೇತ್ರದ ಅನುವಂಶಿಕ ಮೊಕ್ತೇಸರ, ಪವಿತ್ರಪಾಣಿ ವಾಸುದೇವ ಭಟ್ ಸಂಕೇಸ ಹಾಗೂ ಅರ್ಚಕ ಶಿವರಾಜ್ ಭಟ್ ನೇತೃತ್ವದಲಲಿ ನಾಗರಾಜ ಬನದಲ್ಲಿ ಪಂಚಾಮೃತಾಭಿಷೇಕ ಸಹಿತ ತಂಬಿಲ ಸೇವೆ ನೆರವೇರಿತು.