ಕೊಚ್ಚಿ: ವಯನಾಡ್ ದುರಂತದಲ್ಲಿ ಪುನರ್ವಸತಿ ಪ್ರಗತಿಯನ್ನು ಪ್ರತಿ ವಾರ ವರದಿ ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಇಂದು ಸೂಚಿಸಿದೆ.
ಪ್ರತಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಲಿದೆ. ಘಟನೆಯಲ್ಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು. ಇಂತಹ ದುರ್ಘಟನೆಗಳು ಬೇರೆಡೆ ನಡೆಯದಂತೆ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.
1200 ಕೋಟಿ ರೂ.ನಷ್ಟ ಉಂಟಾಗಿದ್ದು, 231 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಅಂದಾಜಿನಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. 128 ಮಂದಿ ಪತ್ತೆಯಾಗಿಲ್ಲ. 178 ಮಂದಿಯ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಬಿಡುಗಡೆ ಮಾಡಲಾಗಿದ್ದು, 53 ಅಪರಿಚಿತ ಶವಗಳನ್ನು ಸರ್ಕಾರ ಅಂತ್ಯಸಂಸ್ಕಾರ ಮಾಡಿದೆ. 91 ಜನರ ಡಿಎನ್‍ಎ ಸಂಗ್ರಹಿಸಲಾಗಿದೆ. 212 ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. 1055 ಮನೆಗಳು ನಾಶವಾಗಿವೆ ಎಂಬಿತ್ಯಾದಿ ಅಂಕಿಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.