ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತ್ಯಾಜ್ಯ ಸಾಗಾಟಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡಿದ್ದಾರೆ.
ಕೊಲ್ಲಂ ನಿವಾಸಿ ಹಾಗೂ ವಿದ್ಯಾನಗರ ಚಾಲ ರಸ್ತೆಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ಅಬ್ದುಲ್ ರಶೀದ್ ಹಾಗೂ ಈತನ ಸಹಾಯಕ ಅಸ್ಸಾಂ ನಿವಾಸಿ ಅಬ್ದುಲ್‍ಹಮೀದ್ ಬಂಧಿತರು. ಗೂಡ್ಸ್ ಆಟೋದಲ್ಲಿ ತ್ಯಾಜ್ಯ ತಂದು ಪೆರುಂಬಳ ಕೆ.ಕೆ ತೊಟ್ಟಿ ರಸ್ತೆಯ ತೆರೆದ ಪ್ರದೇಶದಲ್ಲಿ ಸುರಿದಿದ್ದಾರೆ. ಈ ಬಗ್ಗೆ ಆಸುಪಾಸಿನ ನಿವಾಸಿಗಳು ನೀಡಿದ ಮಾಹಿತಿಯನ್ವಯ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಸುರಿದ ತ್ಯಾಜ್ಯವನ್ನು ಅವರಿಂದಲೇ ತೆರವುಗೊಳಿಸಿ, ಇದನ್ನು ವೈಜ್ಞಾನಿಕ ರಈತಿಯಲ್ಲಿಸ ಂಸ್ಕರಿಸಿದ ನಂತರ ಇವರನ್ನು ಬಂಧಿಸಿದ್ದಾರೆ.