ತಿರುವನಂತಪುರ: ರಾಷ್ಟ್ರಧ್ವಜ ಆರೋಹಣ ಮಾಡುವಾಗ ಕೆಲವೊಮ್ಮೆ ಧ್ವಜ ಬಿಚ್ಚಿಕೊಳ್ಳದೆ ಸಮಸ್ಯೆಯಾಗುವುದು ಆಗಾಗ ವರದಿಯಾಗುತ್ತವೆ, ಆದರೆ ಕೇರಳದಲ್ಲಿ ಇದಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಘಟನೆಯೊಂದು ಗಮನ ಸೆಳೆದಿದೆ.
ರಾಷ್ಟ್ರಧ್ವಜ ಹಾರಿಸುವಾಗ ಕಂಬದ ಮೇಲ್ಭಾಗದಲ್ಲಿ ಸಿಲುಕಿಕೊಂಡಿತ್ತು, ಏಕಾಏಕಿ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಮುದುರಿದ್ದ ಧ್ವಜವನ್ನು ಬಿಚ್ಚಿ ರಾಷ್ಟ್ರ ಧ್ವಜ ಆರೋಹಣಗೊಳ್ಳುವಂತೆ ಮಾಡಿದೆ.
ಇದನ್ನು ನೋಡುತ್ತಿದ್ದಂತೆಯೇ ಅಲ್ಲಿ ಸೇರಿದ್ದವರಿಗೆಲ್ಲ ಅಚ್ಚರಿ ಹಾಗೂ ಸಂತೋಷ ಉಂಟಾಯಿತು.
ಈ ಘಟನೆಯ ವೀಡಿಯೊವನ್ನು ಶಿಲ್ಪಾ ಎಂಬವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಆದರೆ ಯಾವ ಸ್ಥಳದಲ್ಲಿ ನಡೆಯಿತು ಎಂಬ ಬಗ್ಗೆ ವಿವರವನ್ನು ನೀಡಿಲ್ಲ. ಇದೊಂದು ಮ್ಯಾಜಿಕ್ ಅಥವಾ ದೈವಿಕ ಘಟನೆ ಎಂದು ಸೇರಿದ್ದವರು ಮಾತನಾಡಿಕೊಳ್ಳುತ್ತಿದ್ದರು.