ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಗತಿಪರ ಕೃಷಿಕ ಸತೀಶ್ ಭಟ್ ಯೆಯ್ಯೂರು ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಎ ಶಾಲು ಹೊದೆಸಿ, ಫಲ ಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ ಸ್ವಾಗತಿಸಿ, ಅಬ್ದುಲ್ ಕರೀಂ ಡಿ ಕೆ ವಂದಿಸಿದರು. ಶಾಲಾ ನಾಯಕ ಜೀವನ್ ಕುಮಾರ್ ಉಪಸ್ಥಿತರಿದ್ದರು. ಸೂರಂಬೈಲು ಶಡ್ರಂಪಾಡಿ ಸಮೀಪದ ಯೆಯ್ಯೂರು ನಿವಾಸಿಯಾದ ಸತೀಶ್ ಭಟ್ ಅವರ ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾತ್ಯಕ್ಷಿತೆ ನೀಡಲು ಅವರು ನೇತೃತ್ವ ವಹಿಸಿದ್ದರು.