ಕೊಚ್ಚಿ: ತೀವ್ರ ಅಸ್ವಸ್ಥರಾಗಿರುವ ಪತಿಯ ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಡಲು ಮಹಿಳೆಯೊಬ್ಬರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ದಂಪತಿಗೆ ಮಕ್ಕಳಿಲ್ಲ. ಮಗುವಿಗಾಗಿ ಗರ್ಭಧರಿಸಲು 'ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ' (ಎಆರ್‍ಟಿ) ಯಲ್ಲಿ ಬಳಸಲು ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತ್ನಿಯ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿ.ಜಿ.ಅರುಣ್ ಅವರು ಪತಿಯ ಒಪ್ಪಿಗೆಯಿಲ್ಲದೆ ಎಆರ್ ಟಿ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಮಧ್ಯಂತರ ಆದೇಶ ನೀಡಿದ್ದಾರೆ. ಪತಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ಪತಿಯ ಲಿಖಿತ ಒಪ್ಪಿಗೆ ಪಡೆಯಲು ಅಸಾಧ್ಯವಾಗಿದ್ದು, ಇನ್ನು ತಡವಾದರೆ ಕೈ ತಪ್ಪಲಿದೆ ಎಂದು ಪತ್ನಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಮೇಲಿನ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಮಧ್ಯಂತರ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಎಆರ್‍ಟಿ ನಿಯಂತ್ರಣ ಕಾಯ್ದೆಯಂತೆ ಅನುಮತಿಯಿಲ್ಲದೆ ವೀರ್ಯವನ್ನು ಪಡೆದು ಸಂಗ್ರಹಿಸುವುದನ್ನು ಹೊರತುಪಡಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಕುರಿತ ಅರ್ಜಿಯನ್ನು ಸೆ.9ರಂದು ಮತ್ತೊಮ್ಮೆ ಪರಿಗಣಿಸಲಾಗುವುದು ಎಂದೂ ನ್ಯಾಯಾಲಯ ತಿಳಿಸಿದೆ.