ಕಾಸರಗೋಡು: ನಾಯರ್ಸ್ ಸರ್ವೀಸ್ ಸೊಸೈಟಿ(ಎನ್‍ಎಸ್‍ಎಸ್)ಕಾಸರಗೋಡು ತಾಲೂಕು ಕರಯೋಗಂ ಘಟಕದಿಂದ ಅಭಿನಂದನಾ ಸಮಾರಂಭ ಎನ್ ಎಸ್ ಎಸ್ ಮಂದಿರದಲ್ಲಿ ಜರುಗಿತು. ರಾಜ್ಯ ಮುಂದುವರಿದ ವಿಭಾಗ ಕಲ್ಯಾಣ ನಿಗಮದ ನಿರ್ದೇಶಕ ಕೆ.ಸಿ.ಸೋಮನ್ ನಂಬಿಯಾರ್ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಕರಯೋಗ ಸದಸ್ಯರ ಪ್ಲಸ್‍ಟು, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸುಗಳಲ್ಲಿ ರ್ಯಾಂಕ್ ವಿಜೇತರನ್ನು ಅಭಿನಂದಿಸಲಾಯಿತು.
ಎನ್‍ಎಸ್‍ಎಸ್ ಯೂನಿಯನ್ ಅಧ್ಯಕ್ಷ ಹಾಗೂ ನಿರ್ದೇಶಕ ಸಮಿತಿ ಸದಸ್ಯ ವಕೀಲ ಎ.ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಸ್ಮಿತಾ ಬಾಲಕೃಷ್ಣನ್ ಉಪಸ್ಥಿತರಿದ್ದರು. ಕಾಸರಗೋಡು ತಾಲೂಕು ಒಕ್ಕೂಟದ ಉಪಾಧ್ಯಕ್ಷ ಸಿ.ಭಾಸ್ಕರನ್ ನಾಯರ್ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಇ.ಅರವಿಂದಾಕ್ಷನ್ ವಂದಿಸಿದರು.