ನವದೆಹಲಿ: ನೈಸರ್ಗಿಕ ವಿಕೋಪಗಳ ಕುರಿತು ವರದಿ ಮಾಡುವಾಗ ಚಿತ್ರ ಮತ್ತು ವಿಡಿಯೋ ಜೊತೆಗೆ ಘಟನೆಯ ಸಮಯ ಮತ್ತು ದಿನಾಂಕವನ್ನು ಸೇರಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುದ್ದಿ ವಾಹಿನಿಗಳಿಗೆ ನಿರ್ದೇಶನ ನೀಡಿದೆ.
ಇತ್ತೀಚಿನ ಘಟನೆಗಳ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ಅನಾಹುತಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಮರು ಪೋಸ್ಟ್ ಮಾಡುವ ಮೂಲಕ ಘಟನೆಯ ಗಂಭೀರತೆಯನ್ನು ತಪ್ಪಾಗಿ ನಿರೂಪಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ವಯನಾಡ್ ಮತ್ತು ಹಿಮಾಚಲ ಪ್ರದೇಶದ ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ಹೊಸ ಪ್ರಸ್ತಾವನೆ ನೀಡಲಾಗಿದೆÉ.
ಕೆಲವು ದೃಶ್ಯಗಳನ್ನು ಕೆಲವು ದಿನಗಳ ನಂತರ ತೋರಿಸುವುದರಿಂದ ವೀಕ್ಷಕರಲ್ಲಿ ತಪ್ಪು ಕಲ್ಪನೆಗಳು ಮತ್ತು ತಪ್ಪುಗ್ರಹಿಕೆಗಳನ್ನು ಉಂಟುಮಾಡುತ್ತದೆ ಎಂದು ಸಚಿವಾಲಯ ಗಮನಸೆಳೆದಿದೆ. ಮೋರ್ವಿ ಅಣೆಕಟ್ಟು ದುರಂತದ ಚಿತ್ರಗಳನ್ನು ಸಹ ಅನೇಕ ಜನರು ವಯನಾಡು ದುರಂತಕ್ಕೆ ಸೇರಿದವರು ಎಂದು ಹಂಚಿಕೊಂಡಿರುವುದು ಇಲ್ಲಿ ಉಲ್ಲೇಖನೀಯ.