HEALTH TIPS

ಅನಾಥ ಮಕ್ಕಳಿಗೆ ಎದೆಹಾಲುಣಿಸಲು ಹೊರಟ ಎರಡು ಮಕ್ಕಳ ತಾಯಿ

           ಡುಕ್ಕಿ: ಕೇರಳದಲ್ಲಿ ಭೂಕುಸಿತದಿಂದ ಭಾರಿ ಸಾವು ನೋವು ಮತ್ತು ವಿನಾಶದ ವರದಿಗಳ ನಡುವೆ ನೆರೆಯ ಇಡುಕ್ಕಿ ಜಿಲ್ಲೆಯಿಂದ ಮನಕಲಕುವ ವರದಿಯೊಂದು ಬಂದಿದೆ.

         ಇಡುಕ್ಕಿಯ ಎರಡು ಮಕ್ಕಳ ತಾಯಿಯೊಬ್ಬರು ವಯನಾಡು ಭೂಕುಸಿತದಲ್ಲಿ ಪೋಷಕರನ್ನು ಕಳೆದುಕೊಂಡ ಹಸುಗೂಸುಗಳಿಗೆ ಎದೆಹಾಲುಣಿಸಿ, ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ.

          ಕೇರಳದ ಕೇಂದ್ರ ಭಾಗದ ಇಡುಕ್ಕಿಯಲ್ಲಿರುವ ತಮ್ಮ ನಿವಾಸದಿಂದ ಮಹಿಳೆ ಮತ್ತು ಆಕೆಯ ಪತಿ, 4 ವರ್ಷ ಹಾಗೂ 4 ತಿಂಗಳ ಎರಡು ಮಕ್ಕಳ ಜೊತೆ ವಯನಾಡಿಗೆ ತೆರಳಿದ್ದಾರೆ.

           ಮಾರ್ಗ ಮಧ್ಯೆ ಮಾಧ್ಯಮಗಳ ಜೊತೆ ಮಾತನಾಡಿರುವ ಆ ಮಹಿಳೆ, 'ನಾನು ಎರಡು ಮಕ್ಕಳ ತಾಯಿ. ತಾಯಿ ಇಲ್ಲದ ಮಕ್ಕಳ ಪರಿಸ್ಥಿತಿ ಏನು ಎಂಬುದು ನನಗೆ ತಿಳಿದಿದೆ. ಅದರಿಂದಲೇ ನಾನು ಅನಾಥ ಮಕ್ಕಳಿಗೆ ಎದೆಹಾಲುಣಿಸುವ ನಿರ್ಧಾರಕ್ಕೆ ಬಂದಿದ್ದೇನೆ' ಎಂದು ಹೇಳಿದ್ದಾರೆ.

              ಈ ಬಗ್ಗೆ ನನ್ನ ಗಂಡನ ಜೊತೆ ಚರ್ಚಿಸಿದಾಗ ಅವರೂನನ್ನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಮಕ್ಕಳು, ಪೋಷಕರನ್ನು ಕಳೆದುಕೊಂಡಿರುವ ಬಗ್ಗೆ ಸುದ್ದಿ ಕೇಳಿದ ಕೂಡಲೇ ನೆರವಿಗೆ ಮುಂದಾದೆವು ಎಂದು ಅವರು ತಿಳಿಸಿದ್ದಾರೆ.

            ವಯನಾಡು ಜಿಲ್ಲೆಯ ಅತ್ತಮಲ, ಮುಂಡಕ್ಕೈ, ಚೂರಲ್ಮಲ, ನೂಲ್ಪುಳಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಭಾರಿ ಕುಸಿತ ಸಂಭವಿಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಸಾವಿಗೆ ಕಾರಣವಾಗಿದೆ. ಮಂಗಳವಾರ ಮುಂಜಾನೆ 2ರಿಂದ 4 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ.

ಈ ಭಾಗದಲ್ಲಿ ಜುಲೈ 30ರವರೆಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿತ್ತು. ಎರಡು ದಿನದಲ್ಲಿ 115-204 ಮಿ.ಮೀ ಮಳೆ ಆಗಬಹುದು ಎಂದೂ ಅಂದಾಜಿಸಿತ್ತು. ವಾಸ್ತವವಾ‌ಗಿ 572 ಮಿ.ಮೀ. ಮಳೆ ಸುರಿದಿದೆ ಎಂದು ವರದಿಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries