HEALTH TIPS

ಲೈಂಗಿಕ ಕಿರುಕುಳ ಆರೋಪಕ್ಕೆ ಪತರಗುಟ್ಟಿದ ಮಾಲಿವುಡ್

          ಕೊಚ್ಚಿ: ನ್ಯಾಯಮೂರ್ತಿ ಕೆ. ಹೇಮಾ ಆಯೋಗದ ವರದಿ ಕೇರಳ ಚಿತ್ರರಂಗದಲ್ಲಿ ಸಂಚಲನ ಎಬ್ಬಿಸಿದ ಬೆನ್ನಿಗೇ ಕೇಳಿಬಂದ ಲೈಂಗಿಕ ಕಿರುಕುಳದ ಆರೋಪಗಳಿಗೆ ಮಾಲಿವುಡ್ ಪತರಗುಟ್ಟಿದ್ದು, ರಾಜೀನಾಮೆ ಪರ್ವವೂ ಆರಂಭವಾಗಿ, ಘಟಾನುಘಟಿ ನಟರೂ ಮುಖಭಂಗ ಅನುಭವಿಸುವಂತಾಗಿದೆ.

           ಮಲಯಾಳಂ ಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ಮಂಗಳವಾರ ರಾಜೀನಾಮೆ ನೀಡಿದ್ದು, ಸಂಘದ ಕಾರ್ಯಕಾರಿ ಸಮಿತಿಯನ್ನೂ ವಿಸರ್ಜನೆ ಮಾಡಲಾಗಿದೆ.

         ಮಲಯಾಳಂ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ನಟಿಯರಿಂದ ನಟರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

'ಅಮ್ಮ' ಅಧ್ಯಕ್ಷ ಮೋಹನ್ ಲಾಲ್ ರಾಜೀನಾಮೆ ಘೋಷಿಸುವುದಕ್ಕೂ ಮುನ್ನ ಮಂಗಳವಾರ ಎಲ್ಲ ಪದಾಧಿಕಾರಿಗಳ ಆನ್​ಲೈನ್ ಮೀಟಿಂಗ್ ಕರೆದು ಚಿತ್ರರಂಗದ ಅನಿರೀಕ್ಷಿತ ಬೆಳವಣಿಗೆಗಳ ಕುರಿತು ರ್ಚಚಿಸಿ, ಅಧ್ಯಕ್ಷರು- ಸದಸ್ಯರು ಸೇರಿ ಎಲ್ಲರ ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ. ಆರೋಪಗಳಿಗೆ ನೈತಿಕ ಹೊಣೆ ಹೊತ್ತು 'ಅಮ್ಮ'ದ ಪ್ರಸ್ತುತ ಆಡಳಿತ ಮಂಡಳಿಯವರು ರಾಜೀನಾಮೆ ನೀಡಿದ್ದಾರೆ ಎಂದು ಸಂಘ ತಿಳಿಸಿದೆ. ನಿರ್ಗಮಿತ ಆಡಳಿತ ಮಂಡಳಿ ಸಂಘದ ಪೂರ್ವ ನಿಗದಿತ ಅನಿವಾರ್ಯ ಚಟುವಟಿಕೆಗಳನ್ನು ನಿರ್ವಹಿಸಲಿದೆ. ಅಲ್ಲದೆ ಸರ್ವ ಸದಸ್ಯರ ಸಭೆ ಕರೆದು 2 ತಿಂಗಳ ಒಳಗೆ ಹೊಸ ಆಡಳಿತ ಮಂಡಳಿ ರಚಿಸಲಾಗುವುದು. ಸದ್ಯದಲ್ಲೇ ಹೊಸ ನಾಯಕತ್ವ ಕಾರ್ಯರೂಪಕ್ಕೆ ಬರಲಿದೆ, ಟೀಕಿಸುತ್ತ ನಮ್ಮನ್ನು ಸರಿಪಡಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದೂ ಸಂಘ ತಿಳಿಸಿದೆ.

ಬಂಗಾಳಿ ಕಲಾವಿದೆ ಶ್ರೀಲೇಖಾ ಮಿತ್ರ ಆರೋಪ ಹಿನ್ನೆಲೆಯಲ್ಲಿ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸ್ಥಾನಕ್ಕೆ ಮಲಯಾಳಂ ಚಿತ್ರನಿರ್ದೇಶಕ ರಂಜಿತ್, ನಟಿ ರೇವತಿ ಸಂಪತ್ ಆರೋಪದ ಹಿನ್ನೆಲೆಯಲ್ಲಿ ನಟ ಸಿದ್ದಿಕಿ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ್ಸ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.

             ಏಳು ಸದಸ್ಯರ ತನಿಖಾ ತಂಡ: ನ್ಯಾ.ಹೇಮಾ ಆಯೋಗದ ವರದಿ ಬಳಿಕ ಕೇರಳ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕುರಿತ ಹಲವು ಆರೋಪಗಳು ಹೊರಹೊಮ್ಮಿದ್ದವು. ಅಂಥ ಆರೋಪಗಳ ತನಿಖೆಗಾಗಿ ಕೇರಳ ಸರ್ಕಾರವು ಏಳು ಸದಸ್ಯರ ವಿಶೇಷ ತನಿಖಾ ತಂಡದ ರಚನೆಯನ್ನು ಘೋಷಿಸಿತ್ತು.

ನಟಿಯರ ಸಂತೋಷ: 'ಅಮ್ಮ' ಪದಾಧಿಕಾರಿಗಳ ರಾಜೀನಾಮೆ ಕುರಿತು ಹಲವು ಕಲಾವಿದರು, ಅದರಲ್ಲೂ ನಟಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. 'ಮುಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಪೃಥ್ವಿರಾಜ್ ಅವರಂಥ ಯುವನಟರು ಸಮರ್ಥರಿದ್ದಾರೆ' ಎಂದು ನಟಿ ಶ್ವೇತಾ ಮೆನನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಅಮ್ಮ' ಸಂಘಟನೆ ನಿಜವಾಗಿಯೂ ಉತ್ತಮವಾಗಿದೆ, ಆದರೆ ಅದರ ಕೆಲವು ಪದಾಧಿಕಾರಿಗಳಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ಹಿರಿಯ ನಟಿ ಉಷಾ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries