ಕಾಸರಗೋಡು: ಈ ಹಿಂದೆ ಎಸ್.ಪಿ.ಯಾಗಿದ್ದ ಡಿ.ಶಿಲ್ಪಾ ಅವರನ್ನು ಕಾಸರಗೋಡು ಜಿಲ್ಲಾ ಎಸ್.ಪಿ.ಯಾಗಿ ಮತ್ತೆ ನೇಮಕ ಮಾಡಲಾಗಿದೆ. ಹಾಲಿ ಎಸ್.ಪಿ. ಪಿ. ಬಿಜೋಯಿ ಅವರನ್ನು ತಿರುವನಂತಪುರ ಪೊಲೀಸ್ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ನೇಮಿಸಲಾಗಿದೆ. 2016ರ ಬ್ಯಾಚ್‌ನ ಐಪಿಎಸ್ ಆಗಿದ್ದ ಡಿ.

ಬೆಂಗಳೂರಿನ ಎಚ್.ಎಸ್.ಆರ್. ಲೇ ಔಟ್‌ನ ನಿವಾಸಿಯಾದ ಶಿಲ್ಪಾ ಅವರು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ನಲ್ಲಿ ಪದವಿ ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪದವಿ ಪಡೆದಿದ್ದಾರೆ.
2020ರಲ್ಲಿ ಕಾಸರಗೋಡು ಎಸ್‌ಪಿಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಇವರು ಕಾಸರಗೋಡಿನ ಪ್ರಪ್ರಥಮ ಮಹಿಳಾ ಎಸ್.ಪಿ. ಎಂಬ ಕೀರ್ತಿಗೆ ಭಾಜನರಾಗಿದ್ದರು. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದರು.