ಕಾಸರಗೋಡು: ಆರ್ಯ ಯಾನೆ ಮರಾಠ ಸಮಾಜ ಸಂಘದ ಕಾಸರಗೋಡು ವಲಯ ಸಮಾವೇಶ ಪಿಲಿಕುಂಜೆ ಭಗವತಿ ಸಭಾ ಭÀವನದಲ್ಲಿ ನಡೆಯಿತು. ಬೆಳಗ್ಗೆ ಹಿರಿಯರಿಂದ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರ್ಯ ಯಾನೆ ಮರಾಠ ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ ವೈ. ರಾವ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾದ ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಅಧ್ಯಕ್ಷ ಮೋಹನ್ ರಾವ್ ಬೊಂಸ್ಲೇ ಅವರು ಮಾತನಾಡಿ ಸಮಾಜ ಸಂಘದಲ್ಲಿ ಸಮಾಜದ ಜನರು ಮುತುವರ್ಜಿಯಿಂದ ಭಾಗವಹಿಸಿ ಸಂಘವನ್ನು ಬಲಪಡಿಸಿ ಸಮಾಜದ ಜನರ ಉನ್ನತಿಗೆ ಸಹಕರಿಸಬೇಕೆಂದು ಹಾಗು ಸಮಾಜ ಸಂಘದ ಕಾರ್ಯಚಟುವಟಿಕೆಗಳನ್ನು ಜನರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ಆರ್ಯ ಸಮುದಾಯ ಸಂಘ ಕಾಸರಗೋಡು ಅಧ್ಯಕ್ಷ ಗಿರಿಧರ ರಾವ್ ವಾಗ್ಮಾನ್ ಚೊಟ್ಟೆ, ಆರ್ಯ ಯಾನೆ ಮರಾಠ ಸಮಾಜ ಸಂಘ ಕಾರ್ಯದರ್ಶಿ ನಿಖಿಲ್ ಜಾದವ್ ಜಲ್ಲಿಗುಡ್ಡೆ, ಉಪಾಧ್ಯಕ್ಷ ಗಿರೀಶ್ ರಾವ್ ಬೊಂಸ್ಲೇ, ಕೋಶಾಧಿಕಾರಿ ಉದಯ ಶಂಕರ್, ಯುವ ವೇದಿಕೆ ಸಂಚಾಲಕ ಶೈಲೇಶ ಬಹುಮಾನ್, ಜೊತೆ ಕೋಶಾಧಿಕಾರಿ ವಾಣಿ ಜೀವನ್ ಮೋರೆ ಉಪಸ್ಥಿತರಿದ್ದರು. ಇನ್ನೋರ್ವ ಮುಖ್ಯ ಅತಿಥಿ ಕೃಷ್ಣೊಜೀ ಮಾಸ್ತರ್ ಅಂಬುಕುಂಜೆ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಕರೆಕೊಟ್ಟರು.
ಆರ್ಯ ಸಮುದಾಯ ಸಂಘ ಕಾಸರಗೋಡು ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಹುಮಾನ್ ಪಿಲಿಕುಂಜೆ ಪ್ರಾಸ್ತಾವಿಕ ಭಾಷಣಗೈದರು. ಈ ಸಂದರ್ಭದಲ್ಲಿ ಸಮಾಜ ಸಂಘಕ್ಕಾಗಿ ದುಡಿದ ಹಿರಿಯ ವ್ಯಕ್ತಿಗಳನ್ನು ಗೌರವಿಸಲಾಯಿತು ಹಾಗು ವಿದ್ಯಾಭ್ಯಾಸ, ಕ್ರೀಡೆ, ಸಮಾಜ ಸೇವೆ, ಕಲಾಕ್ಷೇತ್ರ, ಉದ್ಯೋಗ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಸರಗೋಡು ವಲಯದ ಸದಸ್ಯರನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಸರಗೋಡು ವಲಯ ಸಂಚಾಲಕ ಕುಸುಮಾಕರ ಚೌವ್ಹಾಣ್ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ನೂತನ ವಲಯ ಸಂಚಾಲಕರಾಗಿ ದಯ ಪ್ರಸಾದ್ ಬಹುಮಾನ್ ಪಿಲಿಕುಂಜೆ ಅವರನ್ನು ಆರಿಸಲಾಯಿತು. ಚೈತ್ರ ದಿನೇಶ್ ಭರೆಕರ್ ಹಾಗು ಶ್ರುತಿ ಅಜಿತ್ ಜಾದವ್ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಬಹುಮಾನ್ ಸ್ವಾಗತಿಸಿದರು. ಹೇಮಲತಾ ಬಹುಮಾನ್ ವಂದಿಸಿದರು.