ಕಾಸರಗೋಡು: ಸಾರ್ವಜನಿಕ ಮಾರುಕಟ್ಟೆಯಲ್ಲಿ ಕಾಳಧನ, ಕಾಳಸಂತೆ, ಬೆಲೆ ಏರಿಕೆ ನಿಯಂತ್ರಣಕ್ಕೆ ಜಿಲ್ಲಾಡಳಿತದ ನೇತೃತ್ವದಲ್ಲಿ ಕ್ರಮಗಳನ್ನು ಬಲಪಡಿಸಿ ಎಡಿಎಂ ನೇತೃತ್ವದಲ್ಲಿ ಕಾಸರಗೋಡು, ಕುಂಬಳೆ ಪೇಟೆಗಳ ವಿವಿಧ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು. 31 ಅಂಗಡಿಗಳ ತಪಾಸಣೆ ವೇಳೆ 10 ಅಂಗಡಿಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ನಿಖರವಾದ ಬೆಲೆ ಪಟ್ಟಿಯನ್ನು ನಿರ್ವಹಿಸದ ಅಂಗಡಿಗಳು ಪಟ್ಟಿಯನ್ನು ಪ್ರದರ್ಶಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಅಖಿಲ್, ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ತಾಲೂಕು ಸರಬರಾಜು ಅಧಿಕಾರಿ ಪಡಿತರ ಪರಿವೀಕ್ಷಕರು ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಆಹಾರ ಸುರಕ್ಷತಾ ಅಧಿಕಾರಿಗಳು ಮೊದಲಾದವರು ಜಂಟಿ ತಪಾಸಣೆಯಲ್ಲಿ ಭಾಗವಹಿಸಿದ್ದರು.
ಕಾಸರಗೋಡು ತಾಲೂಕು ಸರಬರಾಜು ಅಧಿಕಾರಿ ಬಿ.ಕೃಷ್ಣನಾಯ್ಕ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ ಪಿ. ಮನ್ಸೂರ್ ಅಳತೆ ಮತ್ತು ತೂಕ ನಿಯಂತ್ರಣ ವಿಭಾಗದ ಇನ್ಸ್ ಪೆಕ್ಟರ್ ರತೀಶ್ ಹಾಗೂ ಪಡಿತರ ನಿರೀಕ್ಷಕರಾದ ಪ್ರಭಾಕರನ್, ಪ್ರದೀಪ್, ದಿಲೀಪ್ ಪ್ರಭಾ ಜಂಟಿ ತಪಾಸಣೆಯಲ್ಲಿ ಭಾಗವಹಿಸಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ತಪಾಸಣೆ ಮುಂದುವರಿಸಿದ್ದಾರೆ.