ಮಧುಮೇಹಿಗಳಿ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕಾದುದು ಅಗತ್ಯ. ಮಧುಮೇಹಿಗಳು ಹಾಲು ಕುಡಿಯಬಹುದೇ ಎನ್ನುವ ಅನುಮಾನ ಸಾಕಷ್ಟು ಜನರಲ್ಲಿದೆ. ಕುಡಿಯುವುದಾದರೂ ಯಾವ ಹಾಲು ಕುಡಿಯಬೇಕು ಎಂಬುದಕ್ಕೆ ಆರೋಗ್ಯ ತಜ್ಞರು ನೀಡಿರುವ ಉತ್ತರ ಇಲ್ಲಿದೆ.
ಮಧುಮೇಹಿಗಳಿ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಆದರೆ ದನದ ಹಾಲಿಗಿಂತ ಸಿಹಿಗೊಳಿಸದ ತೆಂಗಿನ ಹಾಲು ಮಧುಮೇಹ ಹೊಂದಿರುವವರಿಗೆ ಸೂಕ್ತವಾದ ಆಯ್ಕೆಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೇ ಲೋ ಫ್ಯಾಟ್ ಹಾಲನ್ನು ಬಳಕೆ ಮಾಡಬೇಕು. ಹೃದ್ರೋಗಿಯಾಗಿದ್ದರೂ ಸಹ ಲೋ ಫ್ಯಾಟ್ ಅಥವಾ ಸ್ಕಿಮ್ಡ್ ಹಾಲನ್ನು ಬಳಸಬಹುದು. ಮಧುಮೇಹಿಗಳು ಸೋಯಾ ಅಥವಾ ಬಾದಾಮಿ ಹಾಲನ್ನು ಸಹ ಸುಲಭವಾಗಿ ಬಳಸಬಹುದು.
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕ್ಯಾಲ್ಸಿಯಂ ಭರಿತ ಹಾಲನ್ನು ಆಹಾರದಲ್ಲಿ ಸೇರಿಸಬಹುದು. ಅಲ್ಲದೆ ಕಾರ್ಬೋಹೈಡ್ರೇಟ್ ಕಡಿಮೆ ಇರುವ ಹಾಲು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಶುದ್ದ ಹಾಲಿನಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ, ಇದು ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಕಡಿಮೆ ಕೊಬ್ಬಿನ ಅಥವಾ ಕೊಬ್ಬು ರಹಿತ ಹಾಲು ಮಧುಮೇಹ ಪೀಡಿತರಿಗೆ ಉತ್ತಮ ಎಂದು ಹೇಳಲಾಗುತ್ತದೆ.
ಇದಲ್ಲದೆ, ಮಧುಮೇಹಿಗಳಿಗೆ ಪ್ರೋಟೀನ್ ಬಹಳ ಮುಖ್ಯ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರೋಟೀನ್ ಭರಿತ ಹಾಲು ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಆದ್ದರಿಂದ ವೈದ್ಯರು ನಿಮ್ಮ ಊಟ ಅಥವಾ ತಿಂಡಿಯೊಂದಿಗೆ ಹಾಲನ್ನು ಶಿಫಾರಸು ಮಾಡುತ್ತಾರೆ.