ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳೊಂದಿಗೆ ಜರಗಿತು.
ಪೆರಾಡಲ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ವಕೀಲ ನವೀನ್ ಬನಾರಿ ಧ್ವಜಾರೋಹಣಗೈದರು. ಅವರು ಮಾತನಾಡಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಲವು ಹೋರಾಟಗಾರರ ತ್ಯಾಗ ಪರಿಶ್ರಮದ ಫಲವಾಗಿದೆ. ಅದನ್ನು ನಾವು ಸ್ಮರಿಸಿಕೊಂಡು ಸ್ವಾತಂತ್ರ್ಯದ ಮೌಲ್ಯವನ್ನು ಸಂರಕ್ಷಿಸಬೇಕಾಗಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ ವಹಿಸಿದ್ದರು. 78 ವರ್ಷಗಳಲ್ಲಿ ಭಾರತ ಗಳಿಸಿದ ಪ್ರಗತಿ ಮತ್ತು ಸವಾಲುಗಳ ಬಗ್ಗೆ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಕುರಿತು ಪ್ರಸಾದ್ ಮಾಸ್ತರ್ ಮತ್ತು ನಿರಂಜನ ರೈ ಪೆರಡಾಲ ಭಾಷಣ ಮಾಡಿದರು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ, ಮುಖ್ಯೋಪಾಧ್ಯಾಯನಿ ಮಿನಿ. ಪಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆನಂದ ಕೆ. ಮವ್ವಾರು, ಮಾತೃ ಸಮಿತಿ ಅಧ್ಯಕ್ಷೆ ರೇಷ್ಮಾ, ಸಹ ಮುಖ್ಯೋಪಾಧ್ಯಾಯನಿ ಶಾಯಿದ ಬೀವಿ, ನೌಕರ ಸಂಘದ ಕಾರ್ಯದರ್ಶಿ ಪ್ರಭಾಕರನ್ ನಾಯರ್, ಶಶಿಧರ ನಂಬಿಯಾರ್, ಪ್ರಸನ್ನ ಗೌರಿ ಟೀಚರ್, ರಕ್ಷಕ ಶಿಕ್ಷಕರ ಸಂಘದ ಸದಸ್ಯರು ಮಾತೃ ಮಂಡಳಿ ಸದಸ್ಯರು ಶುಭಹಾರೈಸಿದರು. ಸ್ವಾತಂತ್ರೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಬಾಲಕೃಷ್ಣ ಮಾಸ್ತರ್ ವಂದಿಸಿದರು. ನಾರಾಯಣ ಆಸ್ರ ನಿರೂಪಿಸಿದರು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.