ಮಂಜೇಶ್ವರ: ಕೂಡ್ಲಿನ ದೇಶೀಯ ಅಧ್ಯಾಪಕ ಪರಿಷತ್ ಭವನದಲ್ಲಿ ಎನ್ ಟಿ ಯು ವಿನ ವನಿತಾ ಸಂಗಮ ಹಾಗೂ ರಾಮಾಯಣ ಮಾಸಾಚರಣೆ ಕಾರ್ಯಕ್ರಮ ಭಾನುವಾರ ಜರಗಿತು. ಕಾರ್ಯಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಸಮಿತಿಯ ಉಪಾಧ್ಯಕ್ಷ ಪ್ರಭಾಕರ್ ನಾಯರ್ ಮಾತನಾಡಿ, ಪುಸ್ತಕವು ಜ್ಞಾನವನ್ನು ಕೊಟ್ಟಂತೆ ಒಳ್ಳೆಯ ಆದರ್ಶ ಮನಸ್ಸುಗಳು ಒಟ್ಟಿಗೆ ಸೇರಿದಾಗ ಅದು ಹೃದಯವಂತಿಕೆಯನ್ನು ಹೆಚ್ಚಿಸುತ್ತದೆ ಎಂದು ನುಡಿದರು.
ವನಿತಾ ಸಂಗಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದ ನಿವೃತ ರಾಜ್ಯಸಮಿತಿ ಕಾರ್ಯದರ್ಶಿ ರೇವತಿ ಟೀಚರ್ ಸಂಘಟನೆಯನ್ನು ಬಲಪಡಿಸುವಲ್ಲಿ ಮಾತೃ ಶಕ್ತಿಯ ಪಾತ್ರ ಅಮೂಲ್ಯವಾಗಿದೆ. ಸಂಸ್ಕಾರ ಸಂಸ್ಕøತಿಗೆ ಎನ್ ಟಿಯು ಬಹಳ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಸದಾಶಯದ ಮಾತಗಳನ್ನಾಡಿದರು.
ಜಿಲ್ಲಾ ಅಧ್ಯಕ್ಷ ಕೃಷ್ಣನ್ ಟಿ., ಕಾಸರಗೋಡು ಜಿಲ್ಲಾ ವನಿತಾ ವಿಂಗ್ ಅಧ್ಯಕ್ಷೆ ದಿವ್ಯಾ, ಎನ್ ಟಿ ಯು ರಾಜ್ಯ ವನಿತಾ ವಿಂಗ್ ಸಹಸಂಚಾಲಕಿ ಸುಚೀತ ಐಲ ಶುಭಹಾರೈಸಿದರು. ಕಾಸರಗೋಡು ವನಿತ ವಿಂಗ್ ನ ವತಿಯಿಂದ ರಾಮಾಯಣ ಶ್ಲೋಕ ಕಂಠಪಾಠ, ರಸಪ್ರಶ್ನೆ, ದೇಶ ಭಕ್ತಿಗೀತೆ, ಕಥಾ ಪ್ರಸಂಗ ರಚನೆ, ಸ್ಮರಣಶಕ್ತಿ ಪರೀಕ್ಷೆ, ಕಿರಿಯ, ಹಿರಿಯ, ಪ್ರೌಢ, ಹೈಯರ್ ಸೆಕೆಂಡರಿ ಶಾಲಾ ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ಕಥಾ ಪ್ರಸಂಗ ನಿರೂಪಣೆ, ರಸಪ್ರಶ್ನೆ ಹಾಗೂ ದೇಶಭಕ್ತಿಗೀತೆ ಗುಂಪು ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮಂಜೇಶ್ವರ ಎನ್ ಟಿ ಯು ಅಧ್ಯಕ್ಷೆ ಚಂದ್ರಿಕಾ ಕೆ ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.