HEALTH TIPS

ಭಾರತದ ಮೊದಲ 'ಬಾಹ್ಯಾಕಾಶ ದಿನ': ಇಲ್ಲಿದೆ ಸಂಪೂರ್ಣ ಮಾಹಿತಿ

         ನವದೆಹಲಿ ಪ್ರಧಾನಿ ನರೇಂದ್ರ ಮೋದಿಯವರು ಆ.23ರನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದ್ದು, ಇಂದು (ಆ.23) ಭಾರತವು ಮೊದಲ 'ಬಾಹ್ಯಾಕಾಶ ದಿನ' ಸಂಭ್ರಮದಲ್ಲಿದೆ.

         2023ರ ಆ.23ರಂದು ಭಾರತದ ಪ್ರಮುಖ ಬಾಹ್ಯಾಕಾಶ ಯೋಜನೆ 'ಚಂದ್ರಯಾನ-3' ಚಂದ್ರನ ದಕ್ಷಿಣ ಧ್ರುವ ತಲುಪುವ ಮೂಲಕ, ಈ ಸಾಧನೆ ಮಾಡಿದ ಮೊದಲ ದೇಶವೆಂಬ ಖ್ಯಾತಿಗೆ ಭಾರತ ಪಾತ್ರವಾಗಿತ್ತು.

           ಭಾರತವು ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ದೇಶವಾಗಿದೆ. ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಆ.23ರನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಲಾಗಿದೆ.

'ರಾಷ್ಟ್ರೀಯ ಬಾಹ್ಯಾಕಾಶ ದಿನ'?

             ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಐತಿಹಾಸಿಕ ದಿನದ ನೆನಪಿಗಾಗಿ ಈ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಆಚರಿಸಲಾಗುತ್ತಿದೆ. 'ಚಂದ್ರಯಾನ-3' ಯೋಜನೆಯು ಚಂದ್ರನ ದಕ್ಷಿಣ ಧ್ರುವ ತಲುಪಿದ ಜಾಗವನ್ನು ಆ.23ರಂದು ಪ್ರಧಾನಿ ನರೇಂದ್ರ ಮೋದಿಯವರು 'ಶಿವ-ಶಕ್ತಿ ಪಾಯಿಂಟ್‌' ಎಂದು ಕರೆದಿದ್ದರು ಹಾಗೂ ಆ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದ್ದರು.



ಈ ವರ್ಷದ ಥೀಮ್‌ ಏನು ?

              'ಚಂದ್ರನನ್ನು ಮುಟ್ಟುವ ಜತೆಗೆ ಜೀವಗಳನ್ನು ಮುಟ್ಟೋಣ; ಭಾರತದ ಬಾಹ್ಯಾಕಾಶ ಯಾನ' ಎಂಬುದು ಈ ವರ್ಷದ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದ ಥೀಮ್‌ ಆಗಿದೆ. ಭಾರತದ ಬಾಹ್ಯಾಕಾಶದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ.

ಭಾರತ್‌ ಮಂಟಪದಲ್ಲಿ 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಆಚರಿಸಲಾಗುತ್ತಿದ್ದು, ಇಸ್ರೊ ವೆಬ್‌ಸೈಟ್‌ ಹಾಗೂ ಯುಟ್ಯೂಬ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರವಿರಲಿದೆ.

          ಭಾರತೀಯ ಖಗೋಳ ವಿಜ್ಞಾನ ಸಂಸ್ಥೆ(ಐಐಎ)ಯು ಭಾರತದಲ್ಲಿರುವ ತನ್ನ ವಿವಿಧ ಶಾಖೆಗಳಲ್ಲಿ 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಆಚರಿಸುತ್ತಿದ್ದು, ಜನಸಾಮಾನ್ಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

                 ಬೆಂಗಳೂರಿನ ಐಐಎ ಕೋರಮಂಗಲ ಶಾಖೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

           ಪ್ರಧಾನಿ ನರೇಂದ್ರ ಮೋದಿಯವರು 'ಎಕ್ಸ್‌'ನಲ್ಲಿ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದ ಶುಭಾಶಯ ಕೋರಿದ್ದಾರೆ. 'ಎಲ್ಲರಿಗೂ ಮೊದಲ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ದ ಶುಭಾಶಯಗಳು. ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಸ್ಮರಿಸೋಣ. ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆಯನ್ನು ಅಭಿನಂದಿಸೋಣ. ನಮ್ಮ ಸರ್ಕಾರವು ಬಾಹ್ಯಾಕಾಶ ಯೋಜನೆಗಳಿಗೆ ಸದಾ ಬೆಂಬಲ ನೀಡಿದೆ, ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಯೋಜನೆಗಳಿಗೆ ಇನ್ನೂ ಹೆಚ್ಚಿನ ಬೆಂಬಲ ನೀಡಲಿದ್ದೇವೆ' ಎಂದು ಪೋಸ್ಟ್‌ ಮಾಡಿದ್ದಾರೆ.

               ಜಾಗತಿಕ ಮಟ್ಟದಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಶೇ 2-3ರಷ್ಟಿದ್ದು, 2030ರ ವೇಳೆಗೆ ಶೇ 8, 2047ರ ವೇಳೆಗೆ ಶೇ 15ಕ್ಕೆ ತಲುಪುವ ಗುರಿಯಿದೆ. ಭಾರತದಲ್ಲಿ ಒಟ್ಟು 300 ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಿದ್ದು, ಇವುಗಳಲ್ಲಿ ಬಹುತೇಕ ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಆರಂಭಗೊಂಡಿವೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ಇತ್ತೀಚಿನ ಅಪ್ಡೇಟ್​ ಒದಗಿಸುವ ಇಸ್ರೋ ಬಾಹ್ಯಾಕಾಶ ಯಾನ, ವಿಕ್ರಮ್‌ನಲ್ಲಿರುವ ಲ್ಯಾಂಡರ್ ಇಮೇಜರ್ (ಎಲ್‌ಐ) ಮತ್ತು ರೋವರ್ ಇಮೇಜರ್ (ಆರ್‌ಐ) ಚಿತ್ರಗಳನ್ನು ತೆಗೆದಿದೆ ಎಂದು ಹೇಳಿದೆ. ಆರ್‌ಐ ಕ್ಯಾಮೆರಾದಿಂದ ಸೆರೆಹಿಡಿಯಲಾದ ಚಿತ್ರಗಳಲ್ಲಿ ಒಂದಾದ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈನಲ್ಲಿ ಭಾರತದ ರಾಷ್ಟ್ರೀಯ ಲಾಂಛನವನ್ನು ಮುದ್ರಿಸುವ ಪ್ರಯತ್ನಗಳ ಅತ್ಯುತ್ತಮ ದೃಶ್ಯವನ್ನು ಒದಗಿಸುತ್ತದೆ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿದೆ.

ಇಸ್ರೋ ಹೇಳಿದ್ದೇನು?

‘ನಮಗೆ ತಿಳಿದಿರುವಂತೆ, ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮಣ್ಣಿನ ವಿನ್ಯಾಸವು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾಗಿದೆ ಎಂದು ಕಂಡುಬಂದಿದ್ದರಿಂದ ಭಾರತದ ರಾಷ್ಟ್ರೀಯ ಲಾಂಛನವನ್ನು ಮುದ್ರಿಸುವ ಪ್ರಯತ್ನ ಹೆಚ್ಚು ಯಶಸ್ವಿಯಾಗಲಿಲ್ಲ’ ಎಂದು ISRO ಹೇಳಿದೆ, ‘ಪ್ರಗ್ಯಾನ್​ ರೋವರ್​ನ NavCam ಕಪ್ಪು-ಬಿಳುಪು ಕ್ಯಾಮರಾ ಆಗಿದೆ. ವಿಕ್ರಮ್‌ನಲ್ಲಿರುವ ಕ್ಯಾಮೆರಾಗಳು ಬಣ್ಣದ ಕ್ಯಾಮೆರಾಗಳಾಗಿವೆ’ ಎಂದು ಇಸ್ರೋ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries