ಕುಂಬಳೆ: ಬಂದ್ಯೋಡಿನ ಖಾಸಗಿ ಆಸ್ಪತ್ರೆ ದಾದಿ ಕೊಲ್ಲಂ ತೆನ್ಮಲ ನಿವಾಸಿ ಸ್ಮøತಿ(20)ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮೃತದೇಹ ಉನ್ನತ ವೈದ್ಯಕೀಯ ತಪಾಸಣೆಗಾಗಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಪುತ್ರಿ ನೇಣಿಗೆ ಶರಣಾಗಿಲ್ಲ. ಆಕೆಯನ್ನು ಕೊಲೆಗೈದು ನೇಣಿಗೆ ಹಾಕಲಾಗಿದೆ ಎಂಬುದಾಗಿ ಸ್ಮøತಿ ತಂದೆ ಕೋಮಳರಾಜನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಮೂರು ತಿಂಗಳ ಹಿಂದೆ ಆಸ್ಪತ್ರೆಗೆ ಟ್ರೈನಿ ದಾದಿಯಾಗಿ ಸೇರ್ಪಡೆಗೊಂಡಿದ್ದ ಇವರ ಮೃತದೇಹ ಆಸ್ಪತ್ರೆ ಹಿಂಭಾಗದಲ್ಲಿ ತಾನು ವಾಸ್ತವ್ಯ ಹೂಡಿದ್ದ ಹಾಸ್ಟೆಲ್ ಕೊಠಡಿಯ ಕಿಟಿಕಿ ಸರಳಿಗೆ ಶಾಲಿನಿಂದ ತಯಾರಿಸಿದ ನೇಣಿನಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಸಹಜ ಸಾವಿನ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.